Tuesday, April 29, 2025
30.4 C
Bengaluru
LIVE
ಮನೆSportsಸೋಷಿಯಲ್ ಮೀಡಿಯಾದಲ್ಲಿ ಆರ್​​ಸಿಬಿ ಹಿಂದಿ ಖಾತೆ ಓಪನ್: ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

ಸೋಷಿಯಲ್ ಮೀಡಿಯಾದಲ್ಲಿ ಆರ್​​ಸಿಬಿ ಹಿಂದಿ ಖಾತೆ ಓಪನ್: ಹಿಂದಿ ಒಲವಿಗೆ ಕನ್ನಡ ಅಭಿಮಾನಿಗಳ ಆಕ್ರೋಶ

ಬೆಂಗಳೂರು: ಐಪಿಎಲ್​​​​​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನದೆಯಾದ ಕ್ರೇಜ್ ಹುಟ್ಟು ಹಾಕಿದೆ. ಐಪಿಎಲ್​​​​​​​​ನಲ್ಲಿ ಯಾವುದೇ ತಂಡಕ್ಕೆ ಅಭಿಮಾನಿಗಳಿಂದ ಸಿಗದ ಬೆಂಬಲವನ್ನು ಆರ್​​ಸಿಬಿ ಪಡೆದಿದೆ. ಇದೀಗ ಆರ್​​​​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಆರ್​​​ಸಿಬಿ ಅಭಿಮಾನಿಗಳಿಗೆ ಪುಟವನ್ನು ಹಿಂದಿ ಭಾಷೆಯಲ್ಲಿ ತೆರೆದಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಬೆಂಗಳೂರಿನ ಕನ್ನಡ ಸಂಸ್ಕೃತಿಗೆ ಮಾಡಿರುವ ಅವಮಾನ. ಈ ಕ್ಷಣವೇ ಹಿಂದಿ ಪೇಜ್ ಅನ್ನು ರದ್ದು ಮಾಡಿ ಡಿಲೀಟ್ ಮಾಡಿ ಎಂದು ಆಗ್ರಹಿಸಿದ್ದಾರೆ. ಆದರೆ ಆರ್‌ಸಿಬಿ ಕನ್ನಡ ಅಭಿಮಾನಿಗಳ ಆಕ್ಷೇಪಕ್ಕೆ ಇತರೇ ಭಾಷಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ.

ವಿವಾದದ ಬೆನ್ನಲ್ಲೇ ಬಳಿಕ ಎಚ್ಚೆತ್ತ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸ್ಪಷ್ಟನೆ ಕೊಟ್ಟಿದೆ. ಮತ್ತಷ್ಟು ಜನರನ್ನು ತಲುಪುವ ಗುರಿ ಹೊಂದಿದ್ದು, ಕನ್ನಡ, ಹಿಂದಿ ಪೇಜ್ ಓಪನ್ ಮಾಡಿದ್ದೇವೆ. ಜೊತೆಗೆ ಮತ್ತಷ್ಟು ಭಾಷೆಗಳಲ್ಲೂ ಸೋಷಿಯಲ್ ಮೀಡಿಯಾ ಪೇಜ್ ಆರಂಭಿಸುತ್ತೇವೆ ಎಂದು ಸ್ಪಷ್ಟನೆ ಕೊಟ್ಟಿದೆ.

ಆರ್‌ಸಿಬಿ ಮ್ಯಾನೇಜ್‌ಮೆಂಟ್ ಸಮರ್ಥನೆಗೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಬೇರೆ ತಂಡಗಳು ಕನ್ನಡದಲ್ಲಿ ಪೇಜ್ ಓಪನ್ ಮಾಡುತ್ತಾರಾ? ಸಂವಹನಕ್ಕೆ ಬೇಕಾದರೆ ಕನ್ನಡ-ಇಂಗ್ಲಿಷ್ ಸಾಲದೇ ಅಂತ ಪ್ರಶ್ನಿಸಿದ್ದಾರೆ.

ಇನ್ನು ಕೆಲವರು ಆರ್‌ಸಿಬಿ ಏನು ರಣಜಿ ಟೀಮ್ ಅಲ್ಲ, ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದೆ. ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಪೋಸ್ಟ್ ಮಾಡಿದರೆ ತಪ್ಪಲ್ಲ. ಕೆಎಂಎಫ್‌ನವರು ನಂದಿನಿ ಹಾಲಿನ ಬಗ್ಗೆ ದೆಹಲಿಯಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದರೆ ಇದಕ್ಕೆ ಆಕ್ಷೇಪಿಸ್ತೀರಾ ಎಂದು ವಾದಿಸುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments