ಬಹುನಿರೀಕ್ಷಿತ 2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಮಂಡ್ಯ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾನೇ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿಕೊಂಡಿದ್ರು. ಇಷ್ಟೇ ಅಲ್ಲ, ನಾನು ಯಾವುದೇ ಕಾರಣಕ್ಕೂ ಮಂಡ್ಯದಿಂದ ಹಿಂದೆ ಸರಿಯೋ ಮಾತೇ ಇಲ್ಲ ಎಂದಿದ್ರು. ಇದೀಗ ಮಾತಿನಂತೆ ನಡೆದದುಕೊಂಡಿದ್ದು , ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಈ ಮಧ್ಯೆ ಸೇವ್ ಕೆಆರ್ಎಸ್ ಉಳಿಸಿ ಹೋರಾಟಕ್ಕೆ ಸುಮಲತಾ ಧುಮುಕಿದ್ದಾರೆ.
ಈ ಕುರಿತಂತೆ ಸುಮಲತಾ ಅಂಬರೀಶ್, ಕೆ.ಆರ್.ಎಸ್ ಅಣೆಕಟ್ಟೆಯ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಯಲ್ ಬ್ಲಾಸ್ಟ್ಗಿಂತ ಹೆಚ್ಚು ತೀವ್ರತೆಯಲ್ಲಿ ಗಣಿಗಾರಿಕೆಗಳು ಬಳಸುತ್ತಿರುವ ಸೈಲೆಂಟ್ ಬ್ಲಾಸ್ಟ್ ಹಾಗೂ ಮೆಗಾ ಬ್ಲಾಸ್ಟ್ ಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಕೆ.ಆರ್.ಎಸ್ ಅಣೆಕಟ್ಟೆಯ ಹಿತ ರಕ್ಷಣೆಯ ದೃಷ್ಟಿಯಿಂದ ವರದಿ ಸಲ್ಲಿಸದೆ, ಗಣಿ ಮಾಲೀಕರಿಗೆ ಅನುಕೂಲವಾಗುವಂತೆ ಕೆ.ಆರ್.ಎಸ್ ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿರುವ ಜಿಲ್ಲಾಡಳಿತದ ನಡೆಯನ್ನು ನಾನು ವಿರೋಧಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.