ಆರ್ಪಿಫಿಲ್ಮ್ಸ್ ಬ್ಯಾನರ್ ಅಡಿ ಆರ್. ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿರುವ ‘ಕಣಂಜಾರು’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ಶೀರ್ಷಿಕೆ ಬಿಡುಗಡೆ ಮಾಡಿದ್ದ ತಂಡಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಟೀಸರ್ ಬಿಡುಗಡೆ ಆಗಿದ್ದು, ಚಿತ್ರತಂಡಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟೀಸರ್ ನೋಡಿ ಸಾಕಷ್ಟು ಪ್ರೇಕ್ಷಕರು, ಚಂದನವನದ ಕಲಾವಿದರು ಹಾಗೂ ತಂತ್ರಜ್ಞರು ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಥ್ರಿಲ್ಲರ್ ವಿಷಯವನ್ನು ಮುಂದಿಟ್ಟುಕೊಂಡು ಆರ್.ಬಾಲಚಂದ್ರ ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ಮತ್ತಿತರ ಕಡೆ 55ರಿಂದ 60 ದಿನಗಳ ಕಾಲ ಚಿತ್ರೀಕಣ ಮಾಡಲಾಗಿದೆ. ಕಾರ್ಕಳ ಬಳಿಯ ಊರಿನ ಹೆಸರು ಕಣಂಜಾರು ಸಿನಿಮಾ. ಥ್ರಿಲ್ಲರ್ ವಿಷಯ ಆಗಿರುವುದರಿಂದ ಆ ಹೆಸರು ಇಡಲಾಗಿದೆ. ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದು ನಿರ್ಮಾಪಕರೂ ಆಗಿರುವ ಆರ್.ಬಾಲಚಂದ್ರ ಮಾತನಾಡಿದ್ದಾರೆ.
ಈ ಹಿಂದೆ ‘ಮಹಾನುಭಾವರು’ ಚಿತ್ರದಲ್ಲಿ ನಾಯಕ ಜೊತೆಗೆ ನಿರ್ಮಾಣ ಮಾಡಿದ್ದೆ, ಇದೊಂದು ಆಸಕ್ತಿ ಮತ್ತು ಕುತೂಹಲ ಕಾರಿ ಸಂಗತಿಯ ಕಥೆಯನ್ನು ಹೊಂದಿದ್ದರಿಂದ ನಾನೇ ನಿರ್ದೇಶನ ಮಾಡಲು ಮುಂದಾದೆ. ಚಿತ್ರದ ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಬಿಡುಗಡೆ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ ಆರ್. ಬಾಲಚಂದ್ರ.
ಬಾಲಚಂದ್ರ, ಅಪೂರ್ವ, ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್ ಶ್ರೀಧರ್ ಹಾಗು ಮೇಘ ಸೇರಿದಂತೆ ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗ್ಡ್ ಕ್ಯಾಮರ ಚಿತ್ರಕ್ಕಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com