Top Newsಮನರಂಜನೆ

ಕರ್ನಾಟಕದಲ್ಲಿ ಥಗ್ ಲೈಫ್ ರಿಲೀಸ್ ಮಾಡದಿರಲು ನಟ ಕಮಲ್ ನಿರ್ಧಾರ

ಥಗ್ ಲೈಫ್ ಚಿತ್ರವನ್ನು ಸದ್ಯಕ್ಕೆ ಕರ್ನಾಟಕದಲ್ಲಿ ರಿಲೀಸ್ ಮಾಡದಿರಲು ನಟ ಕಮಲ್ ಹಾಸನ್ ನಿರ್ಧರಿಸಿದ್ದಾರೆ. ಈ ವಿಚಾರವನ್ನು ಅವರ ಪರ ವಕೀಲರು ಕರ್ನಾಟಕ ಹೈಕೋರ್ಟ್ ಗೆ ತಿಳಿಸಿದ್ದಾರೆ.

ಒಂದು ಕ್ಷಮೆಯನ್ನು ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯಬಹುದಲ್ವಾ ಎಂಬ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್ ಪರ ವಕೀಲರು, ಕೆಎಫ್​ ಸಿಸಿ ಜೊತೆ ಮಾತುಕತೆ ನಡೆಸಲು ತಮಗೆ ಒಂದು ವಾರ ಸಮಯ ಬೇಕು ಎಂದು ಕೋರ್ಟ್ ಗೆ ಮನವಿ ಮಾಡಿದರು. ಹೀಗಾಗಿ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಜೂನ್ 10ಕ್ಕೆ ಮುಂದೂಡಿದೆ.

ಕಮಲ್ ಹಾಸನ್, ತ್ರಿಶಾ, ಶಿಂಬು ನಟನೆಯ ಮಣಿರತ್ನಂ ನಟನೆಯ ಈ ಸಿನಿಮಾ ನಾಡಿದ್ದು ಕರ್ನಾಟಕ ಹೊರತುಪಡಿಸಿ ಉಳಿದೆಡೆ ರಿಲೀಸ್ ಆಗಲಿದೆ

Comments (0)

Your email address will not be published. Required fields are marked *

Back to top button