ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಫ್ಯಾನ್ಸ್ ಇಟ್ಟುಕೊಂಡಿರೋ ನಿರೀಕ್ಷೆ ತುಂಬಾನೇ ದೊಡ್ಡದು. ಈ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡುವ ಕೆಲಸ ಆಗುತ್ತಿದೆ. ನಿರ್ಮಾಪಕರು ಭರ್ಜರಿ ಹಣ ಸುರಿದು ಸಿನಿಮಾಗೆ ಪ್ರಚಾರ ಮಾಡುತ್ತಿದ್ದಾರೆ. ಸೆಲೆಬ್ರಿಟಿ ಮಕ್ಕಳನ್ನು ಕೂಡ ಇದರಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಹೌದು, ರಾಮ್ ಚರಣ್ ಮಗಳಿಗೆ ಕಲ್ಕಿ 2898 ಎಡಿ ತಂಡದಿಂದ ಗಿಫ್ಟ್ ಸಿಕ್ಕಿದೆ. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.
‘ಕಲ್ಕಿ 2898 ಎಡಿ’ ಸಿನಿಮಾ ತಂಡದವರು ರಾಮ್ ಚರಣ್-ಉಪಾಸನಾ ಮಗಳು ಕ್ಲಿನ್ಕಾರಾಗೆ ಸ್ಕೆಚ್ಚಸ್, ಸ್ಟಿಕ್ಕರ್ಸ್, ಗೊಂಬೆಗಳನ್ನು ಕಳುಹಿಸಿದ್ದಾರೆ. ಈ ಫೋಟೋನ ಉಪಾಸನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಂಡಕ್ಕೆ ಅವರು ಧನ್ಯವಾದ ಹೇಳಿದ್ದಾರೆ. ಇದು ಕೂಡ ಸಿನಿಮಾ ಪ್ರಚಾರದ ಒಂದು ಭಾಗ ಎಂದು ಕೆಲವರು ಊಹಿಸಿದ್ದಾರೆ.
ಸೆಲೆಬ್ರಿಟಿಗಳ ಮಕ್ಕಳಿಗೆ ಆಗಲೇ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿರುತ್ತದೆ. ಸೆಲೆಬ್ರಿಟಿಗಳನ್ನು ಪ್ರಚಾರಕ್ಕೆ ಸೇರಿಸಿಕೊಳ್ಳುವುದರ ಜೊತೆಗೆ ಮಕ್ಕಳನ್ನೂ ಸೇರಿಸಿಕೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಮಕ್ಕಳಲ್ಲೂ ಕುತೂಹಲ ಮೂಡಲಿದೆ. ಈಗಾಗಲೇ ‘ಬುಜ್ಜಿ ಆ್ಯಂಡ್ ಭೈರವ’ ಅನಿಮೇಟೆಡ್ ಸೀರಿಸ್ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಕಾಣುತ್ತಿದೆ. ಅವುಗಳ ವೀಕ್ಷಣೆ ಕೂಡ ಇದರಿಂದ ಹೆಚ್ಚಲಿದೆ.
‘ಕಲ್ಕಿ 2898 ಎಡಿ’ ಚಿತ್ರಕ್ಕೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಜೂನ್ 27ರಂದು ತೆರೆಕಾಣಲಿರೋ ಸಿನಿಮಾಗೆ ಜೂನ್ 7ರಂದೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಲಿದೆ. ಈ ಸಿನಿಮಾದ ಅವಧಿ 2 ಗಂಟೆ 50 ನಿಮಿಷ ಇರಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ಚಿತ್ರದಲ್ಲಿ 6000 ಸಾವಿರ ವರ್ಷಗಳ ಕಥೆ ಇರಲಿದೆ. ಈ ಚಿತ್ರಕ್ಕೆ ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡುತ್ತಿದ್ದು, ಅಶ್ವಿನಿ ದತ್ ನಿರ್ಮಾಣ ಮಾಡಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com