Top Newsಕ್ರೈಂ ಸ್ಟೋರಿರಾಜ್ಯಸುದ್ದಿ

ಲಾರಿ- ಕಾರಿನ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಮೂವರು ಸಾವು

ಕಲಬುರಗಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ  ಸಾವನ್ನಪ್ಪಿದ್ದು , ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಗದಂಪುರ ಬಳಿ ದುರಂತ ನಡೆದಿದೆ.

ಅವಿನಾಶ್(24), ಅಭಿಷೇಕ್(26), ಸಂಜೀವ್(40) ಮೃತರು ಎಂದು ಗುರುತಿಸಲಾಗಿದ್ದು. ಕಾರಿನಲ್ಲಿದ್ದವರು ಬೀದರ್​ನಿಂದ ತೆಲಂಗಾಣದ ಧಾರೂರಿನತ್ತ ತೆರಳುತ್ತಿದ್ದರು. ಈ ವೇಳೆ ತೆಲಂಗಾಣದಿಂದ ಚಿಂಚೋಳಿ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ಘಟನಾ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿದ್ದವರು ಬೀದರ್​ನಿಂದ ತೆಲಂಗಾಣದ ಧಾರೂರಿನತ್ತ ತೆರಳುತ್ತಿದ್ದರು. ಈ ವೇಳೆ ತೆಲಂಗಾಣದಿಂದ ಚಿಂಚೋಳಿ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಮೂವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Comments (0)

Your email address will not be published. Required fields are marked *

Back to top button