ರುಚಿಕರವಾದ ಹಾಗೂ ದಿಡೀರ್ ಅಂತ ಲಂಚ್ ಬಾಕ್ಸ್ಗೆ ದೋಸೆ ಮಾಡಬೇಕಾ..? ಕಡ್ಲೆಪುರಿ ಪೇಪರ್ ದೋಸೆ
ಬೇಕಾಗುವ ಪದಾರ್ಥಗಳು …
. ಕಡ್ಲೆಪುರಿ – 2 ಬಟ್ಟಲು
. ಚಿರೋಟಿ ರವೆ – ಅರ್ಧ ಬಟ್ಟಲು
. ಮೊಸರು -ಅರ್ಧ ಬಟ್ಟಲು
. ಕಡಲೆ ಹಿಟ್ಟು – 2 ಚಮಚ
. ಗೋಧಿ ಹಿಟ್ಟು – 2 ಚಮಚ
. ಬೆಣ್ಣೆ-ಸ್ವಲ್ಪ
. ಎಣ್ಣೆ -ಸ್ವಲ್ಪ
. ಉಪ್ಪು – ರುಚಿಗೆ ತಕ್ಕಷ್ಟು
. ಸಕ್ಕರೆ -ಅರ್ಧ ಬಟ್ಟಲು
ಮಾಡುವ ವಿಧಾನ …..
ಮೊದಲಿಗೆ ಒಂದು ಪಾತ್ರೆಗೆ ಕಡ್ಲೆಪುರಿಯನ್ನು ಹಾಕಿ ತೊಳೆದು , ನೀರು 10 ನಿಮಿಷ ನೆನೆಯಲು ಬಿಡಿ. ಚಿರೋಟಿ ರವೆಗೆ 1 ಬಟ್ಟಲು ನೀರು ಹಾಕಿ ನೆನೆಯಲು ಬಿಡಿ.
ಚಿರೋಟಿ ರವೆ ಹಾಗೂ ಕಡ್ಲೆಪುರಿಯಿಂದ ನೀರನ್ನು ಬಸಿದು , ಮಿಕ್ಸಿ ಜಾರ್ಗೆ ಹಾಕಿಕೊಳ್ಳಿ. ಇದಕ್ಕೆ ಮೊಸರು,ಕಡ್ಲೆಹಿಟ್ಟು, ಗೋಧಿಹಿಟ್ಟು, ಸಕ್ಕರೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಮಿರ್ಶಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿರ್ಶಣ ಮಾಡಿ 15-20 ನಿಮಿಷ ನೆನೆಯಲು ಬಿಡಿ.
ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಬಿಸಿ ಮಅಡಿ , ಸ್ವಲ್ಪ ನೀರು ಚಿಮುಕಿಸಿ ಡಿಶ್ಯೂ ಪೇಪರ್ನಿಂದ ಒರೆಸಿ. ನಂತರ ದೋಸೆ ಹಿಟ್ಟನ್ನು ತೆಳ್ಳಗೆ ಹೋಯ್ದು ಅದರ ಮೇಲೆ ಬೆಣ್ಣೆಹಾಕಿ. ಸುತ್ತಲೂ ಒಂದು ಚಮಚ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಕೆಂಪಗೆ ಬೇಯಿಸಿದರೆ , ರುಚಿಕರವಾದ ಕಡ್ಲೆಪುರಿ ಪೇಪರ್ ದೋಸೆ ಸವಿಯಲು ಸಿದ್ಧ.