ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು ಭೇಟಿಯಾದ ಬಳಿಕ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರೇನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ.

ದರ್ಶನ್ ಅವರಿಗಿಂತ ನಾವೇ ವೀಕ್ ಆಗಿದ್ದೇವೆ. ಅವರಿಗೆ ಜ್ವರ ಇತ್ತು ಈಗ ರಿಕವರಿ ಆಗಿದ್ದಾರೆ. ಇನ್ನೂ ನನ್ನ ಮತ್ತು ಸೋನಲ್ ವಿಚಾರ ಅವರಿಗೆ ಮೊದಲೇ ತಿಳಿದಿತ್ತು. ದರ್ಶನ್ ಅವರೇ ನಮ್ಮ ಮದುವೆ ಡೇಟ್ ಫಿಕ್ಸ್ ಮಾಡಿದ್ದು ಎಂದಿದ್ದಾರೆ. ನನ್ನ ಸಲುವಾಗಿ ಮದುವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ. ನಮ್ಮನ್ನು ಹೆಚ್ಚಾಗಿ ಪ್ರೀತಿಸುವವರ ಮೇಲೆಯೇ ನಮಗೆ ನಂಬಿಕೆ ಹೆಚ್ಚಾಗಿರುತ್ತದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ.

ನಮ್ಮ ಮದುವೆ ದಿನಾಂಕದ ಮುಂಚೆಯೇ ಅವರು ಹೊರಗೆ ಬರುತ್ತಾರೆ ಎನ್ನುವ ಭರವಸೆಯಿದೆ. ಅವರಿಗೆ ಮದುವೆ ಪತ್ರಿಕೆ ಏನು ಕೊಟ್ಟಿಲ್ಲ. ಅದಕ್ಕೆ ಜೈಲಿನಲ್ಲಿ ಅನುಮತಿ ಇಲ್ಲ. ಈಗ ದರ್ಶನ್ ಅವರ ಆಶೀರ್ವಾದ ಪಡೆದು ಬಂದಿದ್ದೇನೆ ಎಂದಿದ್ದಾರೆ. ಈ ವೇಳೆ, ಮನೆ ಊಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ನಗು ಮುಖದಲ್ಲೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರು ತೂಕ ಕಮ್ಮಿ ಆದವರ ಹಾಗೆ ಕಾಣುತ್ತಿದ್ದಾರೆ ಎಂದಿದ್ದಾರೆ.

ಈ ವೇಳೆ, ದರ್ಶನ್‌ಗೆ ಮನಪರಿವರ್ತನೆ ಆಗುವ 2 ಪುಸ್ತಕ ನೀಡಿರುವ ಬಗ್ಗೆ ತರುಣ್ ಹೇಳಿದ್ದಾರೆ. ಲೈಫ್ ಜರ್ನಿ ಹಾಗೂ ಫಿಲಾಸಫಿ ಪುಸ್ತಕ ಕೊಟ್ಟಿದ್ದೇನೆ. ಇನ್ನೂ ಪ್ರಕರಣ ಕೋರ್ಟ್‌ನಲ್ಲಿದೆ. ಈ ಬಗ್ಗೆ ಅದಕ್ಕಾಗಿ ಕಾನೂನು ಅಂತ ಇದೆ ತನಿಖೆ ನಡೆಯುತ್ತಿದೆ. ಇನ್ನೂ ಹೊರಗಿನವರು ಏನು ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾರಂಗದಲ್ಲಿ ಇದೇನು ಹೊಸತಲ್ಲ. ಅವರೇನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತದೆ ಎಂದು ನಂಬಿಕೆ ಇದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ. ಅಂದಹಾಗೆ, ಸೋನಲ್ ಮತ್ತು ತರುಣ್ ಸುಧೀರ್ ಮದುವೆ ಇದೇ ಆಗಸ್ಟ್ 10 ಮತ್ತು 11 ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights