Tuesday, June 24, 2025
26.4 C
Bengaluru
Google search engine
LIVE
ಮನೆಸುದ್ದಿತೇಜಸ್ ಯುದ್ಧ ವಿಮಾನ ಪತನ

ತೇಜಸ್ ಯುದ್ಧ ವಿಮಾನ ಪತನ

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ವಾಯುಪಡೆಯ ತೇಜಸ್ ಯುದ್ಧ ವಿಮಾನ ಪತನವಾಗಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೇನೆ ಆದೇಶಿಸಿದೆ. ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್ ಬಳಿ ಪತನಗೊಂಡಿದೆ. ಪೈಲಟ್ಗಳು ಸುರಕ್ಷಿತವಾಗಿದ್ದಾರೆ.


ಭಾರತೀಯ ವಾಯುಪಡೆಯ ಒಂದು ತೇಜಸ್ ವಿಮಾನವು ಇಂದು ಕಾರ್ಯಾಚರಣೆಯ ತರಬೇತಿಯ ಸಮಯದಲ್ಲಿ ಜೈಸಲ್ಮೇರ್‌ನಲ್ಲಿ ಅಪಘಾತಕ್ಕೀಡಾಯಿತು. ಪೈಲಟ್ ಹೊರಬಂದಿದ್ದಾರೆ ಅಪಘಾತದ ಕಾರಣವನ್ನು ಕಂಡುಹಿಡಿಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೇಜಸ್ ಯುದ್ಧ ವಿಮಾನ ಪತನ ದೃಶ್ಯ ಭಾರತ್ ಶಕ್ತಿ ತರಬೇತಿ ವೇಳೆ ಫೈಟರ್ ಜೆಟ್ ಜೈಸಲ್ಮೇರ್‌ನಲ್ಲಿ ಪತನಗೊಂಡಿದೆ. ಫೈಟರ್ ಜೆಟ್ ಪತನವಾಗಿರುವ ಘಟನೆ ಜವಾಹರ್ ಕಾಲೋನಿ ಬಳಿ ನಡೆದಿದೆ. ಮಧ್ಯಾಹ್ನ 2 ಗಂಟೆಗೆ ಫೈಟರ್ ಜೆಟ್ ಹಾಸ್ಟೆಲ್ ಮೇಲ್ಛಾವಣಿಯ ಮೇಲೆ ಬಿದ್ದು ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಹೇಗೋ ಇಬ್ಬರೂ ಪೈಲಟ್‌ಗಳು ಫೈಟರ್ ಜೆಟ್‌ನಿಂದ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments