ಹೈದರಾಬಾದ್: ಭಾರತ ರಾಷ್ಟ್ರ ಸಮಿತಿ ಪಕ್ಷದ ಆತಂರಿಕ ಭಿನ್ನಾಭಿಪ್ರಾಯ ನಡುವೆ ಅಚ್ಚರಿಯ ಬೆಳವಣಿಗೆ ನಡೆದಿದ್ದು, ಪಕ್ಷದ ಹಿರಿಯ ನಾಯಕಿ ಮತ್ತು ಎಂಎಲ್‌ಸಿ ಕೆ, ಕವಿತಾ ಪಕ್ಷದಿಂದ ಅಮಾನತುಗೊಳಿಸಲಾಗಿದೆ.
ಸ್ವ ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿಯೇ ಪಕ್ಷದ ಕೆ. ಚಂದ್ರಶೇಖರ್ ರಾವ್ ಅವರು ಕೆ. ಕವಿತಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸುವ ನಿರ್ಧಾರವನ್ನು ತಗೆದುಕೊಂಡಿದ್ದಾರೆ.
ತಮ್ಮ ಸೋದರ ಮಾವ ಕೆ.ಹರೀಶ್ ರಾವ್ ಹಾಗೂ ಜೆ.ಸಂತೋಷ್ ಕುಮಾರ್ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಕೆ.ಕವಿತಾ ಹೇಳಿದ್ದರು. ಹರೀಶ್ ರಾವ್ ಮತ್ತು ಜೆ.ಸಂತೋಷ್ ಕುಮಾರ್ ಹಾಲಿ ಸಿಎಂ ರೇವಂತ್ ರೆಡ್ಡಿ ಜೊತೆ ಒಳಒಪ್ಪಂದ ಮಾಡಿಕೊಂಡು ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ಇಮೇಜ್ ಹಾಳು ಮಾಡುತ್ತಿದ್ದಾರೆ ಎಂದು ಕೆ.ಕವಿತಾ ಹೇಳಿದ್ದರು. ಈ ಹಿನ್ನೆಲೆ ಬಳಿಕ ಇಂದು ಕೆ.ಕವಿತಾರನ್ನೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಪಕ್ಷದಿಂದ ಅಮಾನತು ಮಾಡಲಾಗಿದೆ.
ಕೆ.ಕವಿತಾರನ್ನು ತಂದೆ ಕೆ.ಚಂದ್ರಶೇಖರ್ ರಾವ್ ಅವರೇ ಪಕ್ಷದಿಂದ ಅಮಾನತು ಮಾಡಿರುವುದು ವಿಶೇಷ. ಕವಿತಾ ಹೇಳಿಕೆ ಹಾಗೂ ಚಟುವಟಿಕೆಗಳು ಪಕ್ಷದ ತತ್ವ ಸಿದ್ದಾಂತ, ಶಿಸ್ತಿನ ಉಲಂಘನೆಯಾಗಿದೆ ಎಂದು ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ.