ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಲೂಟಿ ಮಾಡುವಲ್ಲಿ ಚಂಬಲ್ ಕಣಿವೆ ದರೋಡೆಕೋರರನ್ನು ಮೀರಿಸಿದ್ದಾರೆ ಎಂದು ಎಂಎಲ್ಸಿ ಸಿ.ಟಿ .ರವಿ ಆರೋಪಿಸಿದ್ದಾರೆ.
ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಹಾಲು, ವಿದ್ಯುತ್, ಪೆಟ್ರೊಲ್ ಸೇರಿದಂತೆ 50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರ ಹಣವನ್ನು ಕಾಂಗ್ರೆಸ್ ಸರ್ಕಾರದವರು ರಾಜ್ಯಕ್ಕೆ ಮಾರಿಯಾಗಿ, ತಮಿಳುನಾಡಿಗೆ ಉಪಕಾರಿಯಾಗಿದ್ದಾರೆ ಎಂದರು.
ಮೋದಿ ಇಲ್ಲದಿದ್ದರೆ ದೇಶ ಉಳಿಯುತ್ತಿತ್ತಾ? ಪುಂಡರು ಹನುಮ ಧ್ವಜ ಕಿತ್ತು ಹಾಕಿದಂತೆ ಹಣೆಯ ಮೇಲಿನ ಕುಂಕುಮವನ್ನೂ ಅಳಿಸಿ ಹಾಕುತ್ತಿದ್ದರು. ನಾಗಮಂಗಲ ಮತ್ತು ಉದಯಗಿರಿ ಗಲಭೆಗಳಲ್ಲಿ ಕಲ್ಲು ಎಸೆದರನ್ನು ಹೆಡೆಮುರಿ ಕಟ್ಟದ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಕಲ್ಲು ಹೊಡೆದವರ ಮೇಲೆ ಬುಲ್ಡೋಜರ್ ಹತ್ತಿಸಬೇಕಾಗಿತ್ತ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.