ಈ ಪ್ರಪಂಚದಲ್ಲಿ ಒಬ್ಬರಂತೆ ಏಳು ಮಂದಿ ಇರುತ್ತಾರೆ ಎಂಬ ನಂಬಿಕೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಒಬ್ಬರಂತೆ ಕಾಣುವ ಮತ್ತೊಬ್ಬರು ಸಿಕ್ಕಿದ್ದೂ ಉಂಟು. ಅದರಲ್ಲೂ ಯಾರಾದರೂ ಸಿನೆಮಾ ತಾರೆಗಳ ಹೋಲಿಕೆ ಹೊಂದಿದ್ದರೆ ಅವರು ಬಹಳ ಬೇಗ ಗುರುತಿಸಲ್ಪಡುವುದರ ಜೊತೆಗೆ ಸಖತ್‌ ಫೇಮಸ್‌ ಕೂಡಾ ಅಗುತ್ತಾರೆ. ಅದೇ ರೀತಿ ಇದೀಗ ಬಾಲಿವುಡ್‌ ಸ್ಟಾರ್‌ ನಟ ಹೃತಿಕ್‌ ರೋಷನ್‌ ಅವರನ್ನೇ ಹೋಲುವ ತದ್ರೂಪಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಬಾಲಿವುಡ್‌ ಖ್ಯಾತ ನಟ ಹೃತಿಕ್‌ ರೋಷನ್‌ ಪ್ರಪಂಚದ ಅತಿ ಸುಂದರ ವ್ಯಕ್ತಿ ಎಂಬ ಬಿರುದಿಗೆ ಪಾತ್ರರಾದವರು. ಇದೀಗ ಈ ನಟನನ್ನೇ ಹೋಲುವ ತದ್ರೂಪಿಯೊಬ್ಬರು ಸಿಕ್ಕಿದ್ದಾರೆ. ಈ ವ್ಯಕ್ತಿ ಮಹರಾಷ್ಟ್ರದ ತಾಸ್ಗಾಂವ್‌ ಎಂಬಲ್ಲಿ ಜ್ಯೂಸ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವರನ್ನು ನೋಡಿ ಅರೇ ಹೃತಿಕ್‌ ರೋಷನ್‌ ನಟನೆ ಬಿಟ್ಟು ಜ್ಯೂಸ್‌ ಮಾರೋ ಕೆಲಸಕ್ಕೆ ಏನಾದ್ರೂ ಸೇರ್ಕೊಂಡ್ರಾ ಎಂದು ನೋಡುಗರು ಫುಲ್‌ ಕನ್ಫ್ಯೂಷನ್‌ ಆಗಿದ್ದಾರೆ.

 

bramha_juice_tagaonಹೆಸರಿನ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೋಡಲು ಥೇಟ್‌ ಬಾಲಿವುಡ್‌ ಸ್ಟಾರ್‌ ಹೃತಿಕ್‌ ರೋಷನ್‌ ಅವರಂತೆ ಕಾಣುವ ವ್ಯಕ್ತಿಯೊಬ್ಬರು ಗ್ರಾಹಕರಿಗೆ ಜ್ಯೂಸ್‌ ಸರ್ವ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 21.1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ಹೃತಿಕ್‌ ರೋಷನ್‌ ತದ್ರೂಪಿಯನ್ನು ನೋಡಿ ಅಚ್ಚರಿ ಪಟ್ಟರೆ ಇನ್ನೂ ಹಲವರು ಇದು ಎಐ ಜನರೇಟೆಡ್‌ ವಿಡಿಯೋ ಎಂದು ಕಾಮೆಂಟ್ಸ್‌ ಮಾಡಿದ್ದಾರೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights