Friday, September 12, 2025
27.7 C
Bengaluru
Google search engine
LIVE
ಮನೆ#Exclusive Newsಜೆಪಿಸಿ ಸಮಿತಿ ಅದೊಂದು ನಾಟಕ ಕಂಪನಿ ; ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​

ಜೆಪಿಸಿ ಸಮಿತಿ ಅದೊಂದು ನಾಟಕ ಕಂಪನಿ ; ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​

ಹುಬ್ಬಳ್ಳಿ: ವಕ್ಫ್​​​​​​​​​​​​​​​​​ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ ನೀಡಿರುವ ಜೆಪಿಸಿ ಸಮಿತಿ ಒಂದು ನಾಟಕ ಕಂಪನಿ. ಅದಕ್ಕೆ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ ಎಂದು ಕಿಡಿಕಾರಿದರು. ನಗರದಲ್ಲಿ ಗುರುವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ಜೆಪಿಸಿ ಅಂದರೆ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ. ಅದಕ್ಕೊಂದು ಲೆಕ್ಕವಿದೆ. ಅವರು ರಾಜ್ಯಕ್ಕೆ ಬರಬೇಕು ಅಂದರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಡೀ ಸಮಿತಿ ತಂಡ ಭೇಟಿ ನೀಡಬೇಕು. ಕೇವಲ ಸಮಿತಿ ಅಧ್ಯಕ್ಷರು ನಮ್ಮಲ್ಲಿ ಬಂದಿದ್ದಾರೆಂದರೆ ಅವರು ಪಕ್ಷದ ಕೆಲಸಕ್ಕಾಗಿ ಬಂದಿದ್ದಾರೆ. ಅವರು ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ವಿ.ಸೋಮಣ್ಣ ಜತೆ ಬಂದಿದ್ದಾರೆ. ಇವರಿಬ್ಬರು ಜೆಪಿಸಿ ಸದಸ್ಯರೇ? ಎಂದು ಪ್ರಶ್ನಿಸಿದರು. ಇಲ್ಲಿಗೆ ಭೇಟಿ ನೀಡಿದವರು ಕೇವಲ ಬಿಜೆಪಿ ಸದಸ್ಯರು ಮಾತ್ರ, ರಾಜಕೀಯ ಉದ್ದೇಶದಿಂದ ಅವರು ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ. ಅವರು ಏನಾದರೂ ರಾಜಕೀಯ ಮಾಡಲಿ. ಸತ್ಯಾಂಶವೇ ಬೇರೆ ಎಂದು ತಿಳಿಸಿದರು.

ಬಿಜೆಪಿಯಿಂದಲೇ ನೋಟಿಸ್‌: ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವಕ್ಫ್​​​​​​​​​​​​​​​​​ ವಿವಾದ ಸೃಷ್ಟಿಸಿದೆ. ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್​​​​​​​​​​​​​​​​​ ಆಸ್ತಿ ವಿಚಾರವಾಗಿ ಧಾರವಾಡ ಸೇರಿ ಬೇರೆ ಜಿಲ್ಲೆಗಳಲ್ಲಿ 2019 ಕ್ಕೂ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಬೊಮ್ಮಾಯಿ ಅವರ ಸರ್ಕಾರವೇ ನೋಟಿಸ್‌ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಜನ ಶಾಂತಿಯುತವಾಗಿರುವುದು ಬೇಕಾಗಿಲ್ಲ ಎಂದು ಟೀಕಿಸಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments