ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರನ್ನು ಅಪರಿಚಿತರು ಹೊತ್ತೊಯ್ದ ಘಟನೆ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ. ಮಾರ್ಚ್ 19ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜೆಪಿ ನಡ್ಡಾ ಪತ್ನಿ ಬಳಸುತ್ತಿದ್ದ ಟೊಯೋಟಾ ಫಾರ್ಚೂನರ್ ಕಾರನ್ನು ಚಾಲಕ ಜೋಗಿಂದರ್ ಸರ್ವೀಸ್ಗೆ ಎಂದು ತೆಗೆದುಕೊಂಡು ಹೋಗಿದ್ರು. ವಾಪಸ್ ನಡ್ಡಾ ಮನೆಗೆ ಕಾರ್ ತೆಗೆದುಕೊಂಡು ಬರುವಾಗ ಮಾರ್ಗಮಧ್ಯೆ ಊಟಕ್ಕೆ ಎಂದು ನಿಲ್ಲಿಸಿದ್ದರು. ಈ ಸಂದರ್ಬದಲ್ಲಿ ನಡ್ಡಾ ಪತ್ನಿಯ ಕಾರನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ಕಾರು ಗುರುಗ್ರಾಮದ ಕಡೆ ತೆರಳಿರುವುದು ಗೊತ್ತಾಗಿದೆ. ಸದ್ಯಕ್ಕೆ ಕಾರು ಎಲ್ಲಿದೆ ಅನ್ನೋದು ಗೊತ್ತಾಗಿಲ್ಲ. ಅಪಹರಣಕ್ಕೀಡಾದ ಕಾರು ಹಿಮಾಚಲ ಪ್ರದೇಶದ ರಿಜಿಸ್ಟ್ರೇಷನ್ ಹೊಮದಿದೆ.


