Saturday, September 13, 2025
21.9 C
Bengaluru
Google search engine
LIVE
ಮನೆ#Exclusive Newsಜಮ್ಮು-ಕಾಶ್ಮೀರ: ಉಧಂಪುರದಲ್ಲಿ ಇಬ್ಬರು ಪೊಲೀಸರ ಮೃತದೇಹ ಪತ್ತೆ, ಅನುಮಾನ ಹೆಚ್ಚಿಸಿದ ಗುಂಡೇಟಿನ ಗಾಯ

ಜಮ್ಮು-ಕಾಶ್ಮೀರ: ಉಧಂಪುರದಲ್ಲಿ ಇಬ್ಬರು ಪೊಲೀಸರ ಮೃತದೇಹ ಪತ್ತೆ, ಅನುಮಾನ ಹೆಚ್ಚಿಸಿದ ಗುಂಡೇಟಿನ ಗಾಯ

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಕೊಂಡೊಯ್ಯಲಾಗುತ್ತಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಕಾಳಿ ಮಠ ದೇವಾಲಯದ ಬಳಿ ವಾಹನವೊಂದರಲ್ಲಿ ಇಬ್ಬರು ಪೊಲೀಸರ ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹದ ಮೇಲೆ ಕಂಡು ಬಂದಿರುವ ಗುಂಡೇಟಿನ ಗಾಯಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇಬ್ಬರೂ ಪೊಲೀಸ್ ಸಿಬ್ಬಂದಿಗಳು ಸೋಪೋರ್‌ನಿಂದ ಉಧಂಪುರದ ತಲ್ವಾರದಲ್ಲಿರುವ ತರಬೇತಿ ಕೇಂದ್ರಕ್ಕೆ ತೆರಳುತ್ತಿದ್ದಾಗ ಬೆಳಗ್ಗೆ 6.30ರ ಸುಮಾರಿದೆ ಘಟನೆ ನಡೆದಿದೆ ಎಂದು ಎಸ್‌ಎಸ್‌ಪಿ ಉಧಂಪುರ ಅಮೋದ್ ಅಶೋಕ್ ನಾಗ್‌ಪುರೆ ಅವರು ಹೇಳಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಯಲ್ಲಿ ಎಕೆ -47 ರೈಫಲ್ ಬಳಸಿರುವುದು ಸಾಬೀತಾಗಿದೆ. ಇಬ್ಬರು ಇದು ಸೋದರ ಸಂಬಂಧಿಯಾಗಿದ್ದು, ಹತ್ಯೆ ಮತ್ತು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಕಾನ್ಸ್‌ಟೇಬಲ್‌ ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ವಿಧಿವಿಧಾನಗಳಿಗಾಗಿ ಜಿಎಂಸಿ ಉಧಂಪುರಕ್ಕೆ ಕೊಂಡೊಯ್ಯಲಾಗುತ್ತಿದ್ದು, ವರದಿಯ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಮಾಹಿತಿ ನೀಡಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments