Monday, December 8, 2025
26.3 C
Bengaluru
Google search engine
LIVE
ಮನೆರಾಜಕೀಯಧರ್ಮಾಧಿಕಾರಿಗಳು ರಾಜಕಾರಣ ಮಾಡೋದು ಯಾರಿಗೂ ಶೋಭೆ ತರಲ್ಲ- ಕುಮಾರಸ್ವಾಮಿ

ಧರ್ಮಾಧಿಕಾರಿಗಳು ರಾಜಕಾರಣ ಮಾಡೋದು ಯಾರಿಗೂ ಶೋಭೆ ತರಲ್ಲ- ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್​​ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ವಾಮೀಜಿಗಳ ಎಂಟ್ರಿ ವಿಚಾರಕ್ಕೆ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದು, ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಬೇಕು ಎಂದು ಎಂದು ಹೇಳಿದ್ದಾರೆ..

ನಾನು ಎರಡು ಬಾರಿ ಸಿಎಂ ಆದೆ. ಅಧಿಕಾರ ಹೋದಾಗ ಯಾವ ಮಠಾಧೀಶರ ನೆರವೂ ಕೇಳಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆ. ಒಕ್ಕಲಿಗ ಸಮಾಜ, ಇನ್ನೊಂದು ಸಮಾಜದ ಬಗ್ಗೆ ಹೇಳಲ್ಲ. ಜಾತಿ ವಿಚಾರ ಹೇಳಿಕೊಂಡು, ಧಾರ್ಮಿಕ ಕ್ಷೇತ್ರಗಳನ್ನ ದುರುಪಯೋಗಪಡಿಸಿಕೊಂಡು, ರಾಜಕಾರಣ ಮಾಡೋದು ಯಾರಿಗೂ ಶೋಭೆ ತರಲ್ಲ.

ಇಲ್ಲಿ ಸ್ವಾಮೀಜಿಗಳು ಸೇರಿ, ಎಲ್ಲರಿಗೂ ನಾನು ಹೇಳ್ತೀನಿ. ಒಕ್ಕಲಿಗ, ಕುರುಬ ಮತ್ತು ಇತರ ಸಮಾಜದ ಸ್ವಾಮೀಜಿಗಳು ಚರ್ಚೆ ಮಾಡಿರೋದನ್ನ ನೋಡಿದ್ದೀನಿ. ಅದು ಅವರ ವೈಯಕ್ತಿಕ ಹೇಳಿಕೆ. ಆದರೆ ಧರ್ಮ ಸಂಘರ್ಷ ಮಾಡಬಾರದು ಎಂದು ಸ್ವಾಮೀಜಿಗಳಿಗೆ ಮನವಿ ಮಾಡ್ತೇನೆ. ರಾಜಕಾರಣಿಗಳು ರಾಜಕಾರಣ ಮಾಡಲಿ ಬಿಡಿ. ಧರ್ಮಾಧಿಕಾರಿಗಳು ಈ ವ್ಯಾಮೋಹ ಬಿಡಬೇಕು. ಡಿಕೆಶಿ ಅವರು ಹಲವು ಬಾರಿ ವಚನ ಹೇಳ್ತಾರೆ. ಇಲ್ಲಿ ಒಂದು ಜಾತಿ ಸಿಎಂ ಅಲ್ಲ. ಒಂದು ಜಾತಿ ಸಿಎಂ ಅದ್ರೆ ಆ ಜಾತಿ ಅಭಿವೃದ್ಧಿ ಆಗಲ್ಲ ಎಂದು ಹೇಳಿದ್ದಾರೆ..

ಕಾಂಗ್ರೆಸ್ ಪಕ್ಷದ ಸರ್ಕಾರ ಅಲ್ಲ ಇದು. ನಾಡಿನ ಜನತೆ ಕಾಂಗ್ರೆಸ್​ಗೆ 140 ಸ್ಥಾನ ಕೊಟ್ಟು ಅಧಿಕಾರ. ಆದರೆ ಇವರು ಕಳೆದ ಎರಡುವರೆ ವರ್ಷದಿಂದ ಮಾಡಿದ್ದು ಏನು? ಬರಿ ಮುಖ್ಯಮಂತ್ರಿ ಕುರ್ಚಿ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಬಗ್ಗೆ ಇವರಿಗೆ ಕಾಳಜಿ ಇದೆಯಾ. ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಅಂತ ಇದೆಯಾ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ಧಾರೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments