Tuesday, March 3, 2026
31.7 C
Bengaluru
Google search engine
LIVE
ಮನೆರಾಜಕೀಯಸಭಾಪತಿ ಸ್ಥಾನದಲ್ಲಿ ಮುಂದುವರೆಯೋದು ಸೂಕ್ತ ಅಲ್ಲ; ಬಸವರಾಜ ಹೊರಟ್ಟಿ

ಸಭಾಪತಿ ಸ್ಥಾನದಲ್ಲಿ ಮುಂದುವರೆಯೋದು ಸೂಕ್ತ ಅಲ್ಲ; ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ಸದನದಲ್ಲಿ ಇತ್ತಿಚಗೆ ನಡೆದ ಬೆಳವಣಿಗೆಗಳು ನನ್ನ ಮನಸ್ಸಿಗೆ ಬೇಸರ ತಂದಿದೆ. ಹೀಗಾಗಿ ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ ಎಂದು ಷರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಸದನದಲ್ಲಿ ನಡೆದ ಬೆಳೆವಣಿಗೆ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಅನಿಸುತ್ತಿದೆ. ನಾನು ಈ ಸ್ಥಾನಕ್ಕೆ ಯೋಗ್ಯ ಇದ್ದಿನೋ ಇಲ್ಲವೋ ಎಂದು ಅನಿಸುತ್ತಿದೆ. ಈ ಸ್ಥಾನಕ್ಕೆ ಘನತೆ ಗೌರವ ಇಲ್ಲದ ಮೇಲೆ ಇಲ್ಲಿ ಇರಬಾರದು ಎಂದು ತೀರ್ಮಾನಕ್ಕೆ ಬಂದಿದ್ದೇನೆ‌ ಎಂದು ಹೇಳಿದ್ದಾರೆ.

ಸದನ ಬಹಳ ಹದಗೆಟ್ಟಿದೆ. ಸಭಾಪತಿಗಳದ ಮಾತು  ಯಾರೂ ಕೇಳುವುದಿಲ್ಲ. ಸದನ ನಡೆಸುವುದು ಬಹಳ ಕಷ್ಟವಾಗಿದೆ. ಸದನದಲ್ಲಿ  ಕುಳಿತು ಸರಿಯಾಗಿ ನಡೆಸದಿದ್ದರೆ ನಾವು ಅಯೋಗ್ಯರು ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಜೈಕಾರ, ಧಿಕ್ಕಾರ ಕೂಗಬಾರದು ಎನ್ನುವ ನಿಯಮವಿದೆ. ಅದರೂ ಅದನ್ನು ಯಾರು ಪಾಲನೆ ಮಾಡುತ್ತಿಲ್ಲ. ಇವುಗಳನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತುಕೊಳ್ಳುವಂತಾಗಿದೆ. 45 ವರ್ಷದ ಅನುಭವ 15 ಮುಖ್ಯಮಂತ್ರಿಗಳ, 12 ಸಭಾಪತಿಗಳನ್ನು ನೋಡಿದ್ದೇನೆ. ನಾನು ಯಾರ ಮೇಲೆ ಆರೋಪ ಮಾಡುವುದಿಲ್ಲ. ಸದನ ನಡೆಸಲು ನನಗೆ ಯೋಗ್ಯತೆಯಿಲ್ಲ ಅನ್ನಿಸುತ್ತಿದೆ ಎಂದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments