ಭೂಮಿಯನ್ನ ಅಪ್ಪಳಿಸಲಿದೆಯಾ ಆ ಕ್ಷುದ್ರ ಗ್ರಹ..? ಎಚ್ಚರ.. ಮತ್ತೊಂದು ಸುತ್ತಿಗೆ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಅಮೇರಿಕಾದ ನಾಸಾ, ಭಾರತದ ಇಸ್ರೋ, ರಷ್ಯ ಚೀನಾ ಸೇರಿದಂತೆ ದೊಡ್ಡ ದೊಡ್ಡ ರಾಷ್ಟ್ರಗಳ ವಿಜ್ಞಾನಿಗಳ ಕಣ್ಣು ಇದೀಗ ಕ್ಷುದ್ರ ಗ್ರಹದತ್ತ ತಿರುಗಿದೆ. ಇಷ್ಟಕ್ಕೂ ಆ ಕ್ಷುದ್ರ ಗ್ರಹವಾದ್ರೂ ಯಾವುದು..? ಅದು ಭೂಮಿಗೆ ಅಪ್ಪಳಿಸಿದ್ರೆ ಎದುರಾಗಬಹುದಾದ ಅಪಾಯವಾದ್ರೂ ಎಂತದ್ದು..? ಯಾವಾಗ ಭೂಮಿಗೆ ಆ ಗ್ರಹ ಬಡಿಯಬಹುದು..ಹೀಗೆ ನಾನಾ ಲೆಕ್ಕಚಾರಗಳು ಖಗೋಳ ವಿಜ್ಞಾನಿಗಳ ತಲೆಯಲ್ಲಿ ಗಿರಕಿ ಹೊಡೆಯುತ್ತಿವೆ.

ಹೌದು, ಸೌರ ಮಂಡಲದಲ್ಲಿ ಕ್ಷುದ್ರ ಗ್ರಹಗಳ ಓಡಾಟ ಕಾಮನ್..ಆದ್ರೆ ಆ ಕ್ಷುದ್ರಗ್ರಹಗಳು ಭೂಮಿಯನ್ನ ಅಪ್ಪಳಿಸೋ ಸಾಧ್ಯತೆ ಇದೆ ಎಂದಾಗ ವಿಜ್ಞಾನಿಗಳ ಕೂತುಹಲ ಗರಿಗೆದರುತ್ತೆ..ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳ ಖಗೋಳ ಸಂಸ್ಥೆಗಳು ಆ ಕ್ಷುದ್ರಗ್ರಹದ ಚಲನಾ ವಲನದ ಮೇಲೆ ಕಣ್ಣಿಡ್ತಾರೆ. ಅದೇ ರೀತಿ ಇದೀಗ ವಿಜ್ಞಾನಿಗಳ ಗಮನ ಸೆಳೆದಿರೋದು ಅಸ್ಟ್ರಾಯ್ಡ್ 2020 ಕೆಟಿ4 ಎಂಬ ಹೆಸರಿನ ಕ್ಷುದ್ರಗ್ರಹ.

ಅಂದಾಗೆ ಈ ಕ್ಷುದ್ರ ಗ್ರಹ ಇದೀಗ ಭೂಮಿಯತ್ತ ಗಂಟೆಗೆ 25ಸಾವಿರ ಕಿಲೋಮೀಟರ್ ಸ್ಪೀಡಲ್ಲಿ ಮುನ್ನುಗ್ಗಿ ಬರ್ತಾ ಇದೆ. ವಿಜ್ಞಾನಿಗಳು ಇದನ್ನ ಅಪೋಲೋ ಕ್ಷುದ್ರಗ್ರಹಗಳ ಸಮೂಹದ ಒಂದು ಗ್ರಹ ಅಂತ ಹೇಳಿದ್ದಾರೆ. ಇದೇ ವೇಗದಲ್ಲಿ ಭೂಮಿಯತ್ತ ಬಂದ್ರೆ, ಸೆಪ್ಟಂಬರ್ 2182ನೇ ಇಸವಿಗೆ ಭೂಮಿಯನ್ನ ಸ್ಪರ್ಶಿಸಬಹುದು ಅಂತ ಅಂದಾಜಿಸಿದ್ದಾರೆ.

ಇನ್ನು ಈ ರೀತಿಯ ಕ್ಷುದ್ರಗ್ರಹಗಳು ಭೂಮಿ ಸಮೀಪಕ್ಕೆ ಬರ್ತಾ ಇರೋದು ಇದೇ ಮೊದಲೇನಲ್ಲ..ನಾಸಾ ವಿಜ್ಞಾನಿಗಳ ಪ್ರಕಾರ 1906 ಅಕ್ಟೋಬರ್ 4ರಂದು ಭೂಮಿಯನ್ನ ಹಲೋ ಎಂಬ ಕ್ಷುದ್ರ ಗ್ರಹವೊಂದು 72 ಮಿಲಿಯನ್ ಕಿಲೋಮೀಟರ್ ದೂರದಲ್ಲಿ ಹಾದು ಹೋಗಿದೆ.. ಅದೇ ಕ್ಷುದ್ರ ಗ್ರಹ ಜುಲೈ 8 2024ಕ್ಕೆ ಭೂಮಿಗೆ ಮತ್ತಷ್ಟು ಹತ್ತಿರವಾಗಲಿದೆ ಅಂತ ತಿಳಿಸಿದ್ದಾರೆ. ಇದರ ಬೆನ್ನೆಲ್ಲೇ ಇದೀಗ ಆಸ್ಟ್ರಾಯ್ಡ್ 2020 ಕೆಟಿ4 ಕ್ಷುದ್ರ ಗ್ರಹ ಕೂಡ ಭೂಮಿಯನ್ನ ರಭಸವಾಗಿ ಸಮೀಪಿಸುತ್ತಿದೆ. ವಿಜ್ಞಾನಿಗಳಲ್ಲೂ ದಿನೇ ದಿನೇ ಆತಂಕ ಹೆಚ್ಚಾಗುತ್ತಿದ್ದು, ಈ ಕ್ಷುದ್ರಗ್ರಹದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.