ಬೆಂಗಳೂರು: ಪರೀಕ್ಷಾ ಪೂರ್ವ ತರಬೇತಿ ಕೇಂದ್ರದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಬಜೆಟ್ ಅನುಮೋದನೆ ಸಿಕ್ಕ ಹಣಕ್ಕಿಂತ ಹೆಚ್ಚು ಹಣಕ್ಕೆ ಆರ್ಡರ್ ಕೊಡಲಾಗಿದೆ. ಬಜೆಟ್ ನಲ್ಲಿ 60 ಕೋಟಿ ರೂಪಾಯಿ ಸ್ಯಾಂಕ್ಷನ್ ಆಗಿತ್ತು. ಆದ್ರೆ, ಬರೋಬ್ಬರಿ 240 ಕೋಟಿ ರೂಪಾಯಿಗೆ ವರ್ಕ್ ಆರ್ಡರ್ ನೀಡಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದೆ ಕಿಕ್ ಬ್ಯಾಕ್ ಸಹ ನಡೆದಿರಬಹುದು ಎಂಬ ಗುಮಾನಿ ವ್ಯಕ್ತವಾಗಿದೆ.
ಯಾವುದೇ ವೃಂದ ಅರ್ಹತೆ ಇಲ್ಲದಿದ್ರೂ ಲಾಬಿ ಮೂಲಕ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ಡಾ.ಕೆ. ಅಂಜುಂ ಹಫೀಜ್ ಅವರನ್ನು ನೇಮಿಸಲಾಗಿದೆ ಎಂಬ ಆರೋಪ ಅಧಿಕಾರಿಗಳ ವಲಯದಿಂದಲೇ ಕೇಳಿಬಂದಿದೆ. ಡಾ.ಕೆ. ಅಂಜುಂ ಹಫೀಜ್ ಮೂಲತಃ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪರೀಕ್ಷತಾ ಸಹಾಯಕ ನಿಯಂತ್ರಕರು.. ಆದ್ರೆ, ನಿಯಮ ಉಲ್ಲಂಘನೆ ಮಾಡಿ ಇವರನ್ನು ಬೆಂಗಳೂರಿನ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿದೆ. ಇದು ಬಾರಿ ಚರ್ಚೆಗೆ ಗ್ರಾಸವಾಗಿದೆ.