ದೇಶ/ವಿದೇಶಸುದ್ದಿ

ಅಮೆರಿಕ ನೆಲೆಗಳ ಮೇಲೆ ಇರಾನ್ ಅಟ್ಟಹಾಸ; ಕುವೈತ್‌ನಲ್ಲಿ ಮುಂದುವರಿದ ಡ್ರೋನ್ ಮಳೆ!

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಏರಿಕೆಯಾಗಿದ್ದು, ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ತನ್ನ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಈ ಕಾರ್ಯಾಚರಣೆಗಾಗಿ ಇರಾನ್ ತನ್ನ ಅತ್ಯಂತ ಶಕ್ತಿಶಾಲಿ ಶಹೀದ್-136 ಡ್ರೋನ್‌ಗಳ ಜೊತೆಗೆ, ಅತ್ಯಾಧುನಿಕ ‘ಅರಾಶ್-2’ (Arash-2) ಡ್ರೋನ್‌ಗಳನ್ನು ಬಳಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಇರಾನ್ ಅಭಿವೃದ್ಧಿಪಡಿಸಿರುವ ಈ ಅರಾಶ್-2 ಡ್ರೋನ್, ಕಿಯಾನ್-2 ಸರಣಿಯ ನವೀಕರಿಸಿದ ಆವೃತ್ತಿಯಾಗಿದ್ದು, ಬರೋಬ್ಬರಿ 150 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ವಿಶೇಷತೆಯೆಂದರೆ, ಇದು ಸುಮಾರು 2,000 ಕಿಲೋಮೀಟರ್ ದೂರದವರೆಗಿನ ಗುರಿಗಳನ್ನು ತಲುಪಿ ಧ್ವಂಸಗೊಳಿಸಬಲ್ಲದು. ಅತ್ಯಂತ ನಿಖರವಾದ ದಾಳಿಗಳು ಮತ್ತು ಗುಂಪು ಗುಂಪಾಗಿ ಕಾರ್ಯಾಚರಣೆ ನಡೆಸುವ ಶಕ್ತಿಯನ್ನು ಹೊಂದಿದ್ದು, ಶತ್ರುಪಾಳೆಯದ ವಾಯುನೆಲೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟುಮಾಡುತ್ತಿದೆ.

ಕುವೈತ್‌ನಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ಸರಣಿ ದಾಳಿಗಳು ಸಮರ ಸನ್ನಿವೇಶವನ್ನು ಮತ್ತಷ್ಟು ಕಠಿಣಗೊಳಿಸಿವೆ. ಇರಾನ್‌ನ ಈ ಡ್ರೋನ್ ತಂತ್ರಜ್ಞಾನವು ಯುದ್ಧ ಭೂಮಿಯಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸಿದ್ದು, ಅಮೆರಿಕ ಈ ದಾಳಿಗಳನ್ನು ಹೇಗೆ ಎದುರಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

Comments (0)

Your email address will not be published. Required fields are marked *

Back to top button