ದೇಶ/ವಿದೇಶ

ಐಪಿಎಲ್ ಪಂದ್ಯಾವಳಿಗಳು ರದ್ದು..! – RCB ಕಪ್ ಗೆಲ್ಲುವ ಆಸೆ ಈಡೇರಲ್ಲ

ಭಾರತ ಹಾಗೂ ಪಾಕಿಸ್ತಾನ ನಡುವೆ ಭೀಕರ ಯುದ್ಧ ನಡೀತಿದೆ. ಇದೇ ಹೊತ್ತಲ್ಲಿ ಐಪಿಎಲ್ ಪಂದ್ಯಾವಳಿಗಳಿಗೂ ಯುದ್ಧದ ಭೀತಿ ಆವರಿಸಿದೆ. ನಿನ್ನೆಯಷ್ಟೇ ಪಂಜಾಬ್ ಹಾಗೂ ದೆಹಲಿ ನಡುವೆ ನಡೆಯುತ್ತಿದ್ದ ಪಂದ್ಯ ರದ್ದಾಗಿತ್ತು. ಇದೀಗ ಪೂರ್ತಿ ಐಪಿಎಲ್ ಟೂರ್ನಿಯೇ ರದ್ದಾಗಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಆಗಿದೆ.

ಈಗಾಗಲೇ ಐಪಿಎಲ್​​​ನಲ್ಲಿ ಲೀಗ್ ಹಂತದ ಮ್ಯಾಚ್​​ಗಳು ಬಹುತೇಕ ಮುಗಿದಿದ್ದು, ಮೇ 20ರಿಂದ ಪ್ಲೇಆಫ್ ಹಂತದ ಪಂದ್ಯಗಳು ಶುರುವಾಗಬೇಕಿತ್ತು.. ಲೀಗ್ ಹಂತದಲ್ಲಿ ಇನ್ನು 12 ಪಂದ್ಯಗಳಷ್ಟೇ ಬಾಕಿ ಇವೆ. ಇಂದು ನಡೆಯಬೇಕಿದ್ದ ಆರ್​ಸಿಬಿ, ಲಖ್ನೋ ಪಂದ್ಯ ಸೇರಿದಂತೆ ಮುಂದಿನ ಎಲ್ಲ ಪಂದ್ಯಗಳನ್ನ ರದ್ದು ಮಾಡಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.

RCB ಅಭಿಮಾನಿಗಳಿಗೆ ಭಾರಿ ನಿರಾಸೆ

ಈ ಬಾರಿಯ ಟೂರ್ನಿಯಲ್ಲಿ ಆರ್​ಸಿಬಿ ತಂಡ ಅದ್ಭುತ ಪ್ರದರ್ಶನ ತೋರಿ ಪ್ಲೇಆಫ್ ಹಂತ ತಲುಪಿದೆ. 16 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ RCB ಟಾಪ್ 1 ಸ್ಥಾನ ಪಡೆದಿತ್ತು. ಈ ಬಾರಿ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದೇ ಗೆಲ್ಲಲಿದೆ ಎನ್ನುವ ವಿಶ್ವಾಸ ಕೂಡ ಇತ್ತು. ಆದರೆ ಈ ಸಲವೂ ಐಪಿಎಲ್ ಟ್ರೋಫಿ ಆರ್​ಸಿಬಿ ಕೈತಪ್ಪಿದೆ. ಭಾರತ-ಪಾಕಿಸ್ತಾನ ಯುದ್ಧ ನಡೆಯುತ್ತಿರುವುದರಿಂದ ಕ್ರಿಕೆಟ್ ಸ್ಟೇಡಿಯಂಗಳನ್ನೇ ಪಾಕಿಸ್ತಾನ ಹಾಗೂ ಉಗ್ರರು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಟೂರ್ನಿಯನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

Comments (0)

Your email address will not be published. Required fields are marked *

Back to top button