ಕ್ರಿಕೆಟ್ಸುದ್ದಿ

ಟಾಸ್​ ಗೆದ್ದ ರಾಜಸ್ತಾನ್​ ಫೀಲ್ಡಿಂಗ್​ ಆಯ್ಕೆ

ಬೆಂಗಳೂರು: ಐಪಿಎಲ್​ 17ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್​ ಹಾಗೂ ರಾಜಸ್ತಾನ್​ ರಾಯಲ್ಸ್​ ತಂಡ ಮುಖಾಮುಖಿಯಾಗಿವೆ. ಮೊಹಾಲಿಯಲ್ಲಿ ಪಂದ್ಯ ಆರಂಭವಾಗಿದ್ದು, ಟಾಸ್​ ಗೆದ್ದ ರಾಜಸ್ತಾನ್​ ರಾಯಲ್ಸ್​ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ.

ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಗೆದ್ದಿರುವ ರಾಜಸ್ತಾನ್​ ರಾಯಲ್ಸ್​ ಅಂಕ ಪಟ್ಟಿಯಲ್ಲಿ 8 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. ಆಡಿದ ಐದರಲ್ಲಿ ಮೂರು ಪಂದ್ಯಗಳನ್ಜು ಕೈ ಚೆಲ್ಲಿಕೊಂಡಿರುವ ಪಂಜಾಬ್​ ಇಂದು ತವರು ನೆಲದಲ್ಲಿ ಪಂದ್ಯ ಗೆಲ್ಲುವ ಇರಾದೆಯಲ್ಲಿದೆ.ಪಂಜಾಬ್​ ತಂಡದಿಂದ ಆರಂಭಿಕ ಬ್ಯಾಟರ್​ಗಳಾಗಿ ಅಥರ್ವ ತೈಡೆ-ಜಾನಿ ಬ್ರೆಸ್ಟೋ ಕಣಕ್ಕಿಳಿದಿದ್ದಾರೆ.

ಟಾಸ್​ ಗೆದ್ಧ ರಾಜಸ್ತಾನ್​ ರಾಯಲ್ಸ್​ ಫೀಲ್ಡಿಂಗ್​ ಆಯ್ದುಕೊಂಡಿದೆ.

ಪಂಜಾಬ್​ನ ಆಡುವ 11 ರ ಬಳಗ: ಅಥರ್ವ ತೈಡೆ, ಜಾನಿ ಬ್ರೆಸ್ಟೋ, ಸ್ಯಾಮ್​ ಕರನ್​ ( ನಾಯಕ), ಪ್ರಬ್​ಸಿಮ್ರಾನ್​, ಲಿವಿಂಗ್​ ಸ್ಟೋನ್​, ಜಿತೇಶ್​ ಶರ್ಮ, ಶಶಾಂಕ್​ ಶರ್ಮ, ಹರ್​ಪ್ರೀತ್​ ಬ್ರಾರ್​, ಹರ್ಷಲ್​ ಪಟೇಲ್​, ಕಾಗಿಸೊ ರಬಾಡ, ಅರ್ಶದೀಪ್​ ಸಿಂಗ್​.

ರಾಜಸ್ತಾನ್​ ರಾಯಲ್ಸ್ ಆಡುವ 11 ರ ಬಳಗ: ಸಿಮ್ರಾನ್​ ಹೆಟ್ಮೆಯರ್​, ತನುಶ್​ ಕೊಟ್ಯಾನ್​, ಸಂಜು ಸ್ಯಾಮ್​ಸನ್​, (ನಾಯಕ) ರಿಯಾನ್​ ಪರಾಗ್​, ಧೃವ ಜುರೆಲ್​, ಟ್ರೆಂಟ್​ ಬೌಲ್ಟ್​, ರೊವ್ಮನ್​ ಪೋವೆಲ್​, ಕೇಶವ್​ ಮಹಾರಾಜ್, ಅವೇಶ್​ ಖಾನ್, ಕುಲ್​ದೀಪ್​ ಸೇನ್, ಯಜುವೇಂದ್ರ ಚಹಲ್​.

 

 

 

Comments (0)

Your email address will not be published. Required fields are marked *

Back to top button