Rishabh Pant: ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪಂತ್ ಗರಂ ಆಗಿದ್ದಾರೆ. ಸತ್ಯ ಗೊತ್ತಿಲ್ಲದೆ ಏಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ ಎಂದು ಪಂತ್, ನೆಟ್ಟಿಗರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ. ಅಷ್ಟಕ್ಕೂ ಪಂತ್ ಈ ರೀತಿಯಾಗಿ ಪ್ರತಿಕ್ರಿಯಿಸಲು ಕಾರಣವೇನು ಎಂಬ ವಿವರ ಇಲ್ಲಿದೆ.
ಭೀಕರ ಅಪಘಾತಕ್ಕೀಡಾಗಿ ವರ್ಷಗಳಿಂದ ಕ್ರಿಕೆಟ್ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, ಕೆಲವು ತಿಂಗಳುಗಳಿಂದ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಂತ್ ಪ್ರಸ್ತುತ ಕಾನ್ಪುರದಲ್ಲಿದ್ದು ಶುಕ್ರವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಆದರೆ ಇದಕ್ಕೂ ಮುನ್ನ ತನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪಂತ್ ಗರಂ ಆಗಿದ್ದಾರೆ. ಸತ್ಯ ಗೊತ್ತಿಲ್ಲದೆ ಏಕೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತೀರಿ ಎಂದು ಪಂತ್, ನೆಟ್ಟಿಗರ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ
ಟ್ವೀಟ್‌ನಲ್ಲಿ ಇರುವುದೇನು?
ವಾಸ್ತವವಾಗಿ, ಇಂದು ಬೆಳಿಗ್ಗೆಯಿಂದ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಪಂತ್ಗೆ ಸಂಬಂಧಿಸಿದ ಪೋಸ್ಟ್ವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ಪೋಸ್ಟ್ನಲ್ಲಿ, ರಿಷಬ್ ಪಂತ್ ಆರ್ಸಿಬಿ ಸೇರಲು ಉತ್ಸುಕರಾಗಿದ್ದು, ಅವರ ಮ್ಯಾನೇಜರ್ ಮೂಲಕ ಆರ್ಸಿಬಿ ಮಾಲೀಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಪಂತ್, ಆರ್ಸಿಬಿ ತಂಡದ ನಾಯಕರಾಗಲು ಬಯಸಿದ್ದರು. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ ಪಂತ್ ಅವರ ಬೇಡಿಕೆಗೆ ಸಮ್ಮತಿಸಲಿಲ್ಲ. ಅಲ್ಲದೆ ಪಂತ್ ಆರ್ಸಿಬಿಗೆ ಬರುವುದು ವಿರಾಟ್ ಕೊಹ್ಲಿಗೆ ಇಷ್ಟವಿಲ್ಲ ಎಂದು ಬರೆಯಲಾಗಿತ್ತು. ಆದರೆ ಈ ಸುದ್ದಿಯನ್ನು ಆಧಾರರಹಿತ ಎಂದು ಕರೆದಿರುವ ಪಂತ್, ಸುಳ್ಳ ಸುದ್ದಿಯನ್ನು ಹಬ್ಬಿಸದಂತೆ ಸಲಹೆ ನೀಡಿದ್ದಾರೆ.