ವಿಶೇಷವೈರಲ್ ನ್ಯೂಸ್ಸುದ್ದಿ
ಮೊಟ್ಟೆಯ ಮೇಲೆ 60 ಯೋಗಾಸನ ಭಂಗಿ; ಬೆರಗು ಮೂಡಿಸಿದ ಕಲಾವಿದ

ಆಂಧ್ರಪ್ರದೇಶ: ಇಂದು ವಿಶ್ವಯೋಗದಿನಾಚರಣೆಯನ್ನು ಎಲ್ಲಡೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರ ಕಲಾವಿದ ಕೋಟೇಶ್ ಬಿಡಿಸಿದ ಅದ್ಭುತ ಚಿತ್ರಗಳು ಎಲ್ಲರ ಮನಸೆಳೆಯುತ್ತಿವೆ. ಕರ್ನೂಲು ಜಿಲ್ಲೆಯ ನಿವಾಸಿ ಕೋಟೇಶ್ ಕೋಳಿ ಮೊಟ್ಟೆಯ ಮೇಲೆ ಬಿಡಿಸಿದ ವಿವಿಧ ರೀತಿಯ ಯೋಗಭಂಗಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇವರು ಕೋಳಿ ಮೊಟ್ಟೆಯ ಮೇಲೆ ಮೈಕ್ರೋ ಬ್ರಷ್ ಸಹಾಯದಿಂದ 60 ಪ್ರಮುಖ ಯೋಗ ಆಸನಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಸುಮಾರು ಎರಡು ಗಂಟೆಗಳಲ್ಲಿ ಸಾಕಷ್ಟು ಶ್ರಮವಹಿಸಿ ಯೋಗಾಸನಗಳ ಸುಂದರ ಚಿತ್ರಗಳನ್ನು ಬಿಡಿಸಿದ್ದು ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com




