ಭೂಮಿ ಸೂರ್ಯನನ್ನು ಸುತ್ತಲು 365 ದಿನ ಹಿಡಿಯುತ್ತೆ ಎಂಬುದು ಎಲ್ಲರಿಗೂ ಗೊತ್ತು. ವಾಸ್ತವದಲ್ಲಿ ಭೂಮಿ ಸೂರ್ಯನ ಸುತ್ತ ತನ್ನ ಕಕ್ಷೆಯನ್ನು ಸುತ್ತಲು 365 ದಿನ.. ಐದು ಗಂಟೆ, 48 ನಿಮಿಷ..46 ಸೆಕೆಂಡ್ ಸಮಯ ಹಿಡಿಯುತ್ತದೆ.
ಹೀಗಾಗಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹೆಚ್ಚುವರಿಯಾಗಿ ಒಂದು ದಿನ ಬರುತ್ತದೆ. ಹೀಗೆ 366 ದಿನಗಳು ಇರುವ ವರ್ಷವನ್ನು ಲೀಪ್ ಇಯರ್ ಎನ್ನುತ್ತೇವೆ. 2024ನೇ ಸಂವತ್ಸರದಲ್ಲಿ 366 ದಿನಗಳಿವೆ.
ಲೀಪ್ ಇಯರ್ (Leap year)ಏಕೆ ಬರುತ್ತದೆ?
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಲೀಪ್ ಇಯರ್ ಬರುತ್ತದೆ. ಲೀಪ್ ಇಯರ್ ಅನ್ನು ನಾಲ್ಕರಿಂದ ಭಾಗಿಸಿದರೇ ಶೇಷ ಖಚಿತವಾಗಿ ಸೊನ್ನೆ ಬರುತ್ತೆ. ಆದರೆ, 100ರಿಂದ ಭಾಗಿಸಿದರೇ ಮಾತ್ರ ಅದು ಲೀಪ್ ಇಯರ್ ಆಗಲ್ಲ. ಪ್ರತಿ ವರ್ಷದ ಬದಲು ಲೀಪ್ ಇಯರ್ನಲ್ಲಿ ಮಾತ್ರ ಫೆಬ್ರವರಿ ತಿಂಗಳಲ್ಲಿ 29 ದಿನ ದಿನಗಳಿರುತ್ತವೆ.
ನಾಲ್ಕು ವರ್ಷಕ್ಕೊಮ್ಮೆ ಲೀಪ್ ಡೇ(Leap Day) ಇರುತ್ತಾ?
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಲೀಪ್ ಡೇಗಳನ್ನು ಜೋಡಿಸುವುದರಿಂದ ಕ್ಯಾಲೆಂಡರ್ ಅನ್ನು 44 ನಿಮಿಷ ವಿಸ್ತರಣೆ ಮಾಡಿದಂತೆ ಆಗುತ್ತದೆ ಎಂದು ವಾಷಿಂಗ್ಟನ್ ಡಿಸಿಯ ನ್ಯಾಷನರ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಂ ತಜ್ಱರು ಹೇಳುತ್ತಾರೆ.
ಲೀಪ್ ಡೇಗಳ ಪರಿಣಾಮ ಕಾಲಕ್ರಮೇಣ ಬೇಸಿಗೆ ನವೆಂಬರ್ನಲ್ಲಿ ಬರಲಿದೆ ಎಂದು ಅಲಬಾಮ ವಿವಿಯ ಫಿಸಿಕ್ಸ್ ಪ್ರೊಫೆಸರ್ ಯುನಾಸ್ ಖಾನ್ ವಿವರಿಸುತ್ತಾರೆ.
1700, 1800, 1900 ವರ್ಷಗಳಲ್ಲಿ ಲೀಪ್ ಡೇ ಬಂದಿರಲಿಲ್ಲ. ಆದರೆ, 2000ನೇ ಇಸವಿಯಲ್ಲಿ ಲೀಪ್ ಡೇ ಬಂದಿತ್ತು. ಏಕೆ ಅಂತೀರಾ? 100, 400ಗಳಿಂದ ಭಾಗಿಸಲ್ಪಡುವ ವರ್ಷ.
ಹಾಗೆಯೇ ಮುಂದಿನ 500 ವರ್ಷಗಳಲ್ಲಿ 2100, 2200, 2300, 2500ನೇ ವರ್ಷದಲ್ಲಿ ಲೀಪ್ ಡೇ ಇರಲ್ಲ.
2028, 2032, 2036ರಲ್ಲಿ ಲೀಪ್ ಡೇಗಳು ಬರುತ್ತವೆ.
ಲೀಪ್ ಡೇ ಸೇರಿಸದಿದ್ರೆ ಏನಾಗುತ್ತದೆ?
ಭೂಮಿ ತನ್ನ ಸುತ್ತ ತಾನು ತಿರುಗಲು ಒಂದು ದಿನ ತೆಗೆದುಕೊಳ್ಳುತ್ತದೆ. ಅಂದರೆ, 24 ಗಂಟೆ ಸಮಯ ಹಿಡಿಯುತ್ತದೆ. ಹಾಗೆಯೇ ಭೂಮಿ ಸೂರ್ಯನ ಸುತ್ತ ಸುತ್ತಲು 365 ದಿನ 5 ಗಂಟೆ 48 ನಿಮಿಷ ತೆಗೆದುಕೊಳ್ಳುತ್ತದೆ.
ಈ ಐದು ಗಂಟೆ 48 ನಿಮಿಷಗಳ ಹೆಚ್ಚುವರಿ ಸಮಯವನ್ನು ನಾಲ್ಕು ವರ್ಷಗಳಿಗೊಮ್ಮೆ ಜೋಡಿಸಿದಾಗ ಲೀಪ್ ಡೇ ಸಿಗುತ್ತದೆ. ಹೀಗೆ ಹೆಚ್ಚುವರಿಯಾಗಿ ಬರುವ ದಿನವನ್ನು ಫೆಬ್ರವರಿ ತಿಂಗಳಿಗೆ ಜೋಡಿಸಲಾಗುತ್ತದೆ.
ಲೀಪ್ ಡೇ ಇಲ್ಲ ಎಂದರೇ ಕೃಷಿ ಕೆಲಸಗಳಿಗೆ ತೊಂದರೆ ಆಗಲಿದೆ. ರೈತರಿಗೆ ಸರಿಯಾದ ಸೀಸನ್ನಲ್ಲಿ ಬಿತ್ತನೆ, ನಾಟಿ ಮಾಡಲು ಆಗಲ್ಲ. ಜೊತೆಗೆ ಕ್ರಿಸ್ಮಸ್ ಬೇಸಿಗೆಯಲ್ಲಿ ಬರುತ್ತದೆ. ಆಗ ಸ್ನೋ ಇರಲ್ಲ ಕ್ರಿಸ್ಮಸ್ ಫೀಲಿಂಗ್ ಇರಲ್ಲ ಎನ್ನುತ್ತಾರೆ ಯೂನಸ್ ಖಾನ್. ಋತುಮಾನಗಳಲ್ಲಿ ಏರುಪೇರಾಗುತ್ತದೆ ಎಂಬುದು ನಾಸಾ ವ್ಯಾಖ್ಯಾನ.
ಹೀಗಾಗಿಯೇ ನಾಲ್ಕು ವರ್ಷಕ್ಕೊಮ್ಮೆ ಫೆಬ್ರವರಿಯಲ್ಲಿ 29 ದಿನ ಬರುವಹಾಗೆ ಗ್ರೆಗೋರಿಯನ್ ಕ್ಯಾಲೆಂಡರ್ ರೂಪಿಸಲಾಗಿದೆ. ಇದು ಲೆಕ್ಕದ ಪ್ರಕಾರವೇ ಇದೆ.