Freedom tv desk : ಜಲ ಮಾರ್ಗದಲ್ಲಿ ಘೀಳೀಡೋಕೆ ಸಜ್ಜಾಗಿ ನಿಂತಿದೆ ಆ ಯುದ್ದ ನೌಕೆ. ಶತ್ರುಗಳು ಸಮುದ್ರದ ಮೇಲೆ ಉಸಿರು ಬಿಡೋಕು ಯೋಚಿಸಬೇಕು..ಅಷ್ಟೊಂದು ತೀಕ್ಷ್ಣವಾಗಿ ಹದ್ದಿನ ಕಣ್ಣಿಟ್ಟು ಕೂರುವಂತಹ ಯುದ್ದ ನೌಕೆಯೊಂದು ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್ ಅಡಿಯಲ್ಲಿ ತಯಾರಾಗಿದೆ.. ಗಂಟೆಗೆ 56ಕಿಲೋಮೀಟರ್ ವೇಗದಲ್ಲಿ ಸಮುದ್ರದ ನೀರನ್ನ ಸೀಳಿಕೊಂಡು ಚಲಿಸುವ ಶಕ್ತಿ ಇದಕ್ಕಿದೆ. ಇನ್ನು 7400 ಟನ್ ತೂಕವಿರುವ ಈ ನೌಕೆಯ ಸಾಮರ್ಥ್ಯಕ್ಕೆ ಸಾಟಿ ಇಲ್ಲ..ಇದು ಐಎನ್ಎಸ್ ಇಂಪಾಲ್..

ಹೌದು..ಐಎನ್ಎಸ್ ಇಂಪಾಲ್ ಇಂದು ಅಧಿಕೃತವಾಗಿ ನೌಕಾಪಡೆ ಸೇರಲಿದೆ.. ಅಕ್ಟೋಬರ್ 20ರಂದೇ ತನ್ನ ಎಲ್ಲಾ ಪರೀಕ್ಷೆಗಳನ್ನು ಪಾಸಾಗಿ ಯುದ್ಧಕ್ಕೆ ಸಜ್ಜಾಗಿ ನಿಂತಿದ್ದ ಈ ನೌಕೆಯನ್ನ ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ..ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ನೌಕಾ ಪಡೆ ಮುಖ್ಯಸ್ಥ ಹರಿ ಕುಮಾರ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. ಇಷ್ಟಕ್ಕೂ ಈ ಯುದ್ಧ ನೌಕೆಯ ಶಕ್ತಿ ಎಂತದ್ದು..ಇದರ ಕಾರ್ಯವೈಖರಿ ಹೇಗಿರುತ್ತೆ..ಸಮುದ್ರದಲ್ಲಿ ಶತ್ರುಗಳ ಮೇಲೆ ಮುಗಿಬೀಳುವ ಪರಿಣಾಮ ಎಷ್ಟರ ಮಟ್ಟಿಗಿದೆ ಅನ್ನುವಂತಹ ಮಾಹಿತಿಗಳೇ ಇಂಟ್ರೆಸ್ಟಿಂಗ್..

ಐಎನ್ಎಸ್ ಇಂಪಾಲ್..ಇಂತಹದ್ದೊಂದು ಅಭೂತಪೂರ್ವ ಶಕ್ತಿ ಇರೋ ಯುದ್ಧ ನೌಕೆಯ ಅವಶ್ಯಕತೆ ದೇಶದ ನೌಕಾಪಡೆಗಿತ್ತು.. ಮೂರು ಭಾಗದಲ್ಲಿ ಸಮುದ್ರವನ್ನ ಹೊಂದಿರೋ ಭಾರತಕ್ಕೆ ಸಮುದ್ರ ಮಾರ್ಗದಿಂದ ಎಂಟ್ರಿಯಾಗೋ ಶತ್ರುಗಳ ಭಯ ಇದ್ದೇ ಇದೆ. ಹೀಗಾಗಿ 24/7 ಕಣ್ಗಾವಲು ಇಡುವಂತಹ ನೌಕಾಧಿಕಾರಿಗಳು ನಮ್ಮಲ್ಲಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿ ತುಂಬುವಂತಹ ಕೆಲಸಕ್ಕೆ 2019ರಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾಡಿದ್ರು. ಅವತ್ತು ನೌಕಾಪಡೆಗೆ ಶಕ್ತಿ ತುಂಬಲೆಂದು ಯುದ್ಧ ನೌಕೆ ತಯಾರಿಗೆ ಅನುಮತಿ ಕೊಟ್ಟಿದ್ರು..ಅದರ ಪರಿಣಾಮವಾಗಿ ತಯಾರಾಗಿ ನಿಂತಿದ್ದು ಐಎನ್ಎಸ್ ಇಂಪಾಲ್.

ಅಂದಾಗೆ ಈ ನೌಕಾಪಡೆಯ ವಿಶೇಷ ಶಕ್ತಿ ಅಂದ್ರೆ ಇದನ್ನ ಮಿಸೈಲ್ ಡೆಸ್ಟ್ರಾಯರ್ ಆಗಿ ಕಾರ್ಯಾಚರಣೆಗೆ ಇಳಿಸಲಾಗಿದೆ. ಇದರ ಪ್ರಮುಖ ಟಾರ್ಗೆಟ್ ಶತ್ರುಗಳ ಸಬ್ ಮೆರಿನ್ ನಿಂದ ಸಿಡಿಯುವ ಮಿಸೈಲ್ ಗಳ ಮೇಲೆ ಕಣ್ಗಾವಲಿಟ್ಟು ಅವುಗಳು ಟಾರ್ಗೆಟ್ ರೀಚ್ ಮಾಡುವ ಮುನ್ನವೇ ಉಡಾಯಿಸೋದು ಇಂಪಾಲ್ ನ ತಾಖತ್ತು.. ಕೇವಲ ಶತ್ರುಗಳು ಸಿಡಿಸುವ ಮಿಸೈಲ್ ಮಟ್ಟ ಹಾಕೋದಷ್ಟೆ ಅಲ್ಲ, ತನ್ನ ನಳಿಕೆಯಿಂದ ಶತ್ರುಗಳ ಮೇಲೆ ಮಿಸೈಲ್ ಸಿಡಿಸುವ ಶಕ್ತಿಯೂ ಇದಕ್ಕಿದೆ. ಪ್ರಪಂಚದ ಅತ್ಯಂತ ವೇಗದ ಬ್ರಹ್ಮೋಸ್ ಕ್ಷಿಪಣಿಯನ್ನು ಉಡಾಯಿಸಬಲ್ಲ ಶಕ್ತಿ ಈ ಯುದ್ಧನೌಕೆಗೆ ಇದೆ.

ಇದು ಆಧುನಿಕ ಕಣ್ಗಾವಲು ರಾಡಾರ್, ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ರಾಕೆಟ್ ಲಾಂಚರ್ ಮತ್ತು ಟಾರ್ಪಿಡೊ ಲಾಂಚರ್ ಅನ್ನು ಹೊಂದಿದೆ. ಇನ್ನು ಈಶಾನ್ಯ ಭಾಗದಲ್ಲಿರುವ ಮಣಿಪುರ ರಾಜ್ಯದ ಇಂಪಾಲ್ ಜಿಲ್ಲೆಯ ಹೆಸರನ್ನೇ ಈ ಯುದ್ಧ ನೌಕೆಗೆ ಇಟ್ಟಿರೋದು ಮತ್ತೊಂದು ವಿಶೇಷ.. ಒಟ್ನಲ್ಲಿ ವಿಶೇಷಗಳ ಸರಮಾಲೆಯನ್ನೇ ಹೊದ್ದಿರುವ ಐಎನ್ಎಸ್ ಇಂಪಾಲ್ ಇಂದು ಅಧಿಕೃತವಾಗಿ ನೌಕಾಪಡೆ ಸೇರಿದೆ. ಶತ್ರುಗಳ ಸದೆ ಬಡಿಯೋದಿಕ್ಕೆ ಬ್ರಹ್ಮಾಸ್ತ್ರ ಸಿಕ್ಕ ಖುಷಿಯಲ್ಲಿ ಭಾರತೀಯ ನೌಕಾಪಡೆ ಶತ್ರುಗಳ ಅಟ್ಟಹಾಸ ಮಟ್ಟ ಹಾಕೋಕೆ ತುದಿಗಾಲಿನಲ್ಲಿ ನಿಂತಿದೆ.


