ಕೊಡಗು: ಅನೈತಿಕ ಸಂಬಂಧದಿಂದಾಗಿ ಅಮಾಯಕರು ಪ್ರಾಣತೆತ್ತಿರುವ ಘಟನೆ, ಕೊಡಗು ಜಿಲ್ಲೆಯ ಪೋನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಡೆದಿದೆ.
ಅಳಿಯನೇ ಅತ್ತೆ, ಮಾವ, ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡಿದ್ದಾನೆ. ಇನ್ನೂ ಈ ಕೃತ್ಯ ನಡೆಸಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಅತ್ತೆ, ಮಾವ, ಪತ್ನಿ ಮತ್ತು ಮಗಳನ್ನ ಗಿರೀಶ್ ಎಂಬಾತ ಕತ್ತಿಯಿಂದ ಕೊಚ್ಚಿ ಕೊಲೆಮಾಡಿದ್ದಾನೆ. ಇನ್ನು ಕೊಲೆಯಾದವರನ್ನು ಮಾವ ಕರಿಯ (75), ಅತ್ತೆ ಗೌರಿ (70), ನಾಗಿ (35), ಕಾವೇರಿ (7) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ


