ಮಂಡ್ಯ : ಕನ್ನಡ ಮಾತನಾಡುವವರ ಸಂಖ್ಯೆ ಗಣ ನೀಯವಾಗಿ ಕುಸಿಯುತ್ತಿದೆ. ಇದು ನಾವು ಒಪ್ಪಿಕೊಳ್ಳಲೇ ಬೇಕಾದ ಕಟುಸತ್ಯ. ಕನ್ನಡ ಅನ್ನದ ಭಾಷೆಯಾಗದಿರುವುದೇ ಇದಕ್ಕೆ ಕಾರಣ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅಭಿಪ್ರಾಯಪಟ್ಟಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಶುಕ್ರವಾರ ಮಹೇಶ್ ಜೋಷಿ ಆಶಯ ಭಾಷಣ ಮಾಡಿದರು. ‘ಇಂದು ಮಕ್ಕಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಉಳಿದಿಲ್ಲ. ಇದಕ್ಕೆ ಪೋಷಕರು ಕಾರಣರಲ್ಲ. ಕನ್ನಡದಿಂದ ಅನ್ನ ಹುಟ್ಟದಿರುವುದೇ ಮುಖ್ಯ ಕಾರಣ. ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಕೇಂದ್ರ ಸರ್ಕಾರದ ಆಡಳಿತಾತ್ಮಕ ಪರೀಕ್ಷೆಗಳು ಕನ್ನಡದಲ್ಲಿ ನಡೆಯುತ್ತಿಲ್ಲ. ಪರಿಣಾಮ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇದಕ್ಕೆ ಪರಿಹಾರ ಏನು ಎಂದು ಚಿಂತಿಸುವ ಅವಶ್ಯಕತೆ ಇದೆ’ ಎಂದೂ ಮಹೇಶ್ ಜೋಷಿ ಈವೇಳೆ ಹೇಳಿದ್ದಾರೆ