Top News

ಭಾರತದ ನಡೆಗೆ.. ಪಾಕಿಸ್ತಾನ ದೇಶಕ್ಕೆ ಹೆಚ್ಚಿದ ಆತಂಕ..!

ಜಮ್ಮು ಕಾಶ್ಮೀರದ ಪಹಲ್​ಗಾಮ್​ನಲ್ಲಿ ಉಗ್ರರ ನರಮೇದಕ್ಕೆ 28 ಜನ ಭಾರತೀಯರು ಬಲಿಯಾಗಿದ್ದಾರೆ. ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಮೇ 7 ರಂದು ಮಾಕ್​​ ಡ್ರಿಲ್ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ಹಲವು ರಾಜ್ಯಗಳಿಗೆ ಸೂಚಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪಾಕಿಸ್ತಾನದೊಂದಿಗೆ ಯುದ್ಧ ಸಾಧ್ಯತೆ ಹಿನ್ನೆಲೆಯಲ್ಲಿ ನಾಳೆ ದೇಶದಲ್ಲಿ ಮಹತ್ವದ ಯುದ್ಧ ಸಿದ್ಧತೆ ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ..1971ರ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಇಂತಹ ಯುದ್ಧಕ್ಕೆ ಭಾರತ ದೇಶ ಸಿದ್ದತೆ ಮಾಡಿಕೊಳ್ಳುತ್ತಿದೆ.54 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂತಹ ನಾಗರಿಕ ಸಿದ್ಧತೆ ಮಾಡಿಕೊಳ್ಳುತ್ತಿದೆ ಭಾರತ ದೇಶ..ದೇಶದ ಪೂರ್ವ ಮತ್ತು ಉತ್ತರ ರಾಜ್ಯಗಳಲ್ಲಿ ನಾಳೆ ಮಾಕ್​ ಡ್ರಿಲ್ ಮಾಡಲಾಗುತ್ತದೆ.​

ಪಾಕಿಸ್ತಾನದ ದಾಳಿಗೆ ಒಳಗಾಗಬಹುದಾದ ಜಿಲ್ಲೆಗಳಲ್ಲೂ ಯುದ್ಧ ಮಾಡುವ ಸಾಧ್ಯತೆಗಳಿವೆ.1965ರ ಯುದ್ಧ, 1971ರ ಯುದ್ಧದ ಸಂದರ್ಭದಲ್ಲಷ್ಟೇ ಇಂತಹ ಸಿದ್ಧತೆ ನಡೆಸಲಾಗಿತ್ತು.ಆದ್ರೆ 1999ರ ಕಾರ್ಗಿಲ್​ ಯುದ್ಧದ ವೇಳೆ ಇಂತಹ ಯುದ್ಧ ಸಿದ್ಧತೆ ನಡೆದಿರಲಿಲ್ಲ.ಪಾಕಿಸ್ತಾನದ ಜೊತೆಗೆ ಯುದ್ಧದ ಕಾರ್ಮೋಡ ದಟ್ಟವಾಗಿರುವ ಹೊತ್ತಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿರುವ ಭಾರತ..

Comments (0)

Your email address will not be published. Required fields are marked *

Back to top button