Thursday, May 1, 2025
29.7 C
Bengaluru
LIVE
ಮನೆ#Exclusive Newsಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆ

ಭಾರತ ಅಂಡರ್ 19 ತಂಡಕ್ಕೆ ಸಮಿತ್ ದ್ರಾವಿಡ್ ಆಯ್ಕೆ

ಭಾರತದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಟೀಮ್ ಇಂಡಿಯಾ ಕಿರಿಯರ ಬಳಗವನ್ನು ಹೆಸರಿಸಲಾಗಿದೆ. ಈ ತಂಡಗಳಲ್ಲಿ ಕರ್ನಾಟಕದ ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಲೆಜೆಂಡ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೂಡ ಕಾಣಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕಿರಿಯರ ತಂಡದ ವಿರುದ್ಧದ ಸರಣಿಗಾಗಿ ಭಾರತ ಅಂಡರ್ 19 ತಂಡವನ್ನು ಪ್ರಕಟಿಸಲಾಗಿದೆ. ಏಕದಿನ ಹಾಗೂ ಟೆಸ್ಟ್  ಸರಣಿಗಾಗಿ ಆಯ್ಕೆ ಮಾಡಲಾದ ಈ ತಂಡಗಳಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಸ್ಥಾನ ಪಡೆದಿದ್ದಾರೆ. ಸಮಿತ್ ಅವರಲ್ಲದೆ ಕರ್ನಾಟಕದ ಯುವ ಆಟಗಾರರಾದ ಕಾರ್ತಿಕೇಯ ಕೆಪಿ, ಸಮರ್ಥ್ ಎನ್ ಹಾಗೂ ಹಾರ್ದಿಕ್ ರಾಜ್ ಕೂಡ ಕಿರಿಯರ ಟೀಮ್​ ಇಂಡಿಯಾಗೆ ಆಯ್ಕೆಯಾಗಿರುವುದು ವಿಶೇಷ.

15 ಸದಸ್ಯರ ಏಕದಿನ ತಂಡದ ನಾಯಕರಾಗಿ ಉತ್ತರ ಪ್ರದೇಶದ ಯುವ ಆಟಗಾರ ಮೊಹಮ್ಮದ್ ಅಮಾನ್ ಆಯ್ಕೆಯಾಗಿದ್ದು, ಇನ್ನು ಉಪನಾಯಕನಾಗಿ ಗುಜರಾತ್​ನ ರುದ್ರ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಟೆಸ್ಟ್ ತಂಡದ ನಾಯಕತ್ವವನ್ನು ಮಧ್ಯ ಪ್ರದೇಶದ ಸೋಹಮ್ ಪಟವರ್ಧನ್​ಗೆ ನೀಡಲಾಗಿದ್ದು, ಉಪನಾಯಕನಾಗಿ ಪಂಜಾಬ್​ನ ವಿಹಾನ್ ಮಲ್ಹೋತ್ರಾ ಆಯ್ಕೆಯಾಗಿದ್ದಾರೆ. ಅದರಂತೆ ಭಾರತ ಅಂಡರ್ 19 ತಂಡಗಳು ಈ ಕೆಳಗಿನಂತಿವೆ…

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments