ಬೆಂಗಳೂರು, ಸೆಪ್ಟೆಂಬರ್ 5: ಹೆಚ್ಚು ಆದಾಯ ಪಡೆಯುವ ಪ್ರತಿಯೊಬ್ಬ ವ್ಯಕ್ತಿ ಕೂಡ ಇನ್ಕಮ್ ಟ್ಯಾಕ್ಸ್ ಕಟ್ಟುವ ಹೊಣೆಗಾರಿಕೆ ಹೊಂದಿರುತ್ತಾರೆ. ಸೆಲಬ್ರಿಟಿಗಳಾದರೂ ಸರಿ ತೆರಿಗೆ ಕಟ್ಟಬೇಕು. ಭಾರತದಲ್ಲಿ 2023-24ರಲ್ಲಿ ಅತಿಹೆಚ್ಚು ತೆರಿಗೆ ಪಾವತಿಸಿರುವ ಟಾಪ್10 ಸೆಲಬ್ರಿಟಿಗಳ ಪಟ್ಟಿಯನ್ನು ಫಾರ್ಚೂನ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪೈಕಿ ಆರು ಕ್ರಿಕೆಟಿಗರಿದ್ದಾರೆ. ಅವರಾರು ಎಂಬ ವಿವರ ಇಲ್ಲಿದೆ.

1. ವಿರಾಟ್ ಕೊಹ್ಲಿ 66 ಕೋಟಿ ರೂ ತೆರಿಗೆ ಪಾವತಿಸುತ್ತಾರೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಆದ ಅವರು ಪಾವತಿಸಿದ ತೆರಿಗೆ ಮೊತ್ತ ಅದು. ಶಾರುಖ್ ಖಾನ್, ದಳಪತಿ ವಿಜಯ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಬಳಿಕ ಅತಿಹೆಚ್ಚು ಟ್ಯಾಕ್ಸ್ ಕಟ್ಟಿದ ಸೆಲಬ್ರಿಟಿ ಅವರು. ಕ್ರೀಡಾಪಟುಗಳ ಪೈಕಿ ಅವರದ್ದೇ ಗರಿಷ್ಠ ತೆರಿಗೆ ಪಾವತಿ.

2. ಎಂಎಸ್ ಧೋನಿ 38 ಕೋಟಿ ರೂ: ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್ ಮತ್ತು ವಿಕೆಟ್ಕೀಪರ್ ಬ್ಯಾಟ್ಸ್ಮ್ಯಾನ್ ಎಂದು ಪರಿಗಣಿಸಲಾದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 2023-24ರಲ್ಲಿ 38 ಕೋಟಿ ರೂ ಟ್ಯಾಕ್ಸ್ ಕಟ್ಟಿದ್ದಾರೆ. ಕ್ರೀಡಾಪಟುಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟಿದವರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರೂ ಜಾಹೀರಾತು, ವಿವಿಧ ಉದ್ದಿಮೆಗಳನ್ನು ಅವರು ನಿರ್ವಹಿಸುತ್ತಾ ಆದಾಯ ಗಳಿಸುತ್ತಿದ್ದಾರೆ.


