ಭಾರತದ ಬ್ಯಾಂಕ್ ಅಕೌಂಟ್ ಗಳು; ಇಂಡಿಯಾ ಟು ದುಬೈ ಟ್ರಾವೆಲ್
ಬೆಂಗಳೂರು: ಸರ್ಕಾರದದಿಂದ ಸೌಲಭ್ಯಪಡೆಯಲು ಬ್ಯಾಂಕ್ ಅಕೌಂಟ್ ತೆರಯುವವರೆ ಎಚ್ಚರ ಎಚ್ಚರ. ಅದ್ರಲ್ಲೂ ಗ್ರಾಮೀಣ ಭಾಗದ ಜನರ ಬಳಿಯೇ ಬಂದು ಬ್ಯಾಂಕ್ ಅಕೌಂಟ್ ಮಾಡಿಕೊಡ್ತಿವೆ. ನಿಮಗೆ ಸರ್ಕಾರದ ಗೃಹಲಕ್ಷೀ, ಮೋದಿಕಾಸು, ಪಿಂಚಣಿಕಾಸು, ಹೀಗ ಹತ್ತು ಹಲವು ಯೋಜನೆಗಳ ಹೆಸರು ಹೇಳಿ ಅಕೌಂಟ್ ಓಪನ್ ಮಾಡುವವರ ಬಗ್ಗೆ ಇರಲಿ ಜಾಗೃತಿ. ನಿಮ್ಮದೆ ದಾಖಲೆಗಳನ್ನು ಪಡೆದುಕೊಂಡು ನಾಳೆ ಓಪನ್ ಆಗುತ್ತೆ ಮೆಸೇಜ್ ಬರುತ್ತೇ ಅಂತ ಹೇಳಿ ಹೋಗ್ತಾರೆ.
ನಿಮ್ದೆ ಆಧಾರ್, ಪೋಟೋ, ಸಹಿ, ಸಿಮ್ ಕಾರ್ಡ್ ಬಳಸೋರು ಮಾತ್ರ ಸೈಬರ್ ಕಳ್ಳರು
ಅದು ಸತ್ಯ ನಿಮ್ಮದೇ ಅಕೌಂಟ್ ಆದ್ರೆ ಅದು ಬಳಕೆ ಆಗೊದು, ಬಳಸೋರು ಮಾತ್ರ ದುಬೈನಲ್ಲಿ ಕುಳಿತಿರುವ ವಂಚಕ ಸೈಬರ್ ಕಳ್ಳರು. ಇನ್ನು ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗ ಹಾಗೂ ಕೂಲಿ ಜನರನ್ನ ಟಾರ್ಗೆಟ್ ಮಾಡೋ ಈ ಗ್ಯಾಂಗ್ ಸರ್ಕಾರ ಸ್ಕೀಮ್ ಹೆಸ್ರೆಳಿ ನಿಮ್ಮ ಹಸ್ರಲ್ಲಿ ಬ್ಯಾಂಕ್ ಖಾತಡ ಓಪನ್ ಮಾಡಿಸ್ತಾರೆ. ಖಾತೆ ಓಪನ್ ಗೆ ನಿಮ್ಮ ಹೆಸ್ರಲ್ಲೇ ಒಂದು ಹೊಸ ಸಿಮ್ ಕಾರ್ಡ್ ಖರೀದಿ ಕೂಡ ಮಾಡ್ತಾರೆ. ಖಾತೆ ತೆರಸಿ ಪಾಸ್ ಬುಕ್ ಸಿಮ್ ಕಾರ್ಡ್ ಅವ್ರೆ ಪಡೆದು ಹಣ ಬಂದ ನಂತರ ನಿಮಗೆ ಹೇಳ್ತಿವಿ ಅಂತ ಅಲ್ಲಿಂದ ಕಾಲ್ಕೀಳ್ತಾರೆ. ಹೇಗಿದ್ದರು ಹಣ ಕೈಯಿಂದ ಹೋಗಿಲ್ಲ ನೀವು ಸುಮ್ಮನಾಗ್ತಿರಾ ಇದಾದ ನಂತರ ಇವರು ನಿಮ್ಮ ಹೆಸ್ರಲ್ಲಿ ಇರೋ ಖಾತೆಗಳನ್ನ ದುಬೈ ಸೈಬರ್ ಕಿಂಗ್ ಪಿನ್ ಗಳಿಗೆ ಕೊಡ್ತಾರೆ. ಒಂದು ಅಕೌಂಟ್ ಗೆ ಇಂತಿಷ್ಟು ಹಣ ಪಡೆದು ದಳ್ಳಾಲಿಗಳು ಮುಂದಿನ ಗ್ರಾಮಕ್ಕೆ ಜನರನ್ನ ಹುಡುಕಿಕೊಂಡು ಹೋಗ್ತಾರೆ.
ಆದ್ರೆ ದುಬೈ ನಿಂದ ಈ ಅಕೌಂಟ್ ಹ್ಯಾಂಡಲ್ ಮಾಡೋ ಕಿಂಗ್ ಪಿನ್ ಗಳು ದೇಶದಲ್ಲಿ ನಡೆಯೋ ಸೈಬರ್ ವಂಚನೆಗೆ ಈ ಖಾತೆಗಳನ್ನ ಬಳಸುತ್ತಾರೆ. ಇತ್ತಿಚೇಗೆ ಕೇಂದ್ರ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಬೆನ್ನತ್ತಿದ ಇನ್ಸ್ಪೆಕ್ಟರ್ ಸುರೇಶ್ ಮತ್ತು ಟೀಮ್ ಈ ಕಹಿ ಸತ್ಯಾ ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು, ಚನ್ನರಾಯಪಟ್ಟಣ ಮೂಲದ ರೈತ ಮಹಿಳೆ ಅಕೌಂಟ್ ನಿಂದ 50ಲಕ್ಷ ಟ್ರಾನ್ಸಕ್ಷನ್ ಆಗಿದೆ. ಆದರೆ ಆ ಮಹಿಳೆಗೆ ಈ ವಿಚಾರವೆ ಗೊತ್ತಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ತನಿಖೆ ನಡೆಸಿದಾಗ ಷಫಿಉಲ್ಲಾ ಎಂಬಾತನ್ನ ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಆರೊಪ ಅಜ್ಮಲ್ ಗೆ
ಪತ್ತೆಗಾಗಿ ಬಲೆ ಬೀಸಿದ್ದಾರೆ. ಅದೇನೇ ಇರ್ಲಿ ಮೋಸ ಹೋಗುವವರು ಇರುವವರೆಗೆ ಮೋಸ ಮಾಡೋರು ಇದ್ದೆ ಇರ್ತಾರೆ ಹಾಗಾಗಿ ಮೋಸ ಹೋಗುವ ಮುನ್ನ ಇರಲಿ ಎಚ್ಚರ.