Tuesday, January 27, 2026
24 C
Bengaluru
Google search engine
LIVE
ಮನೆ#Exclusive Newsವರ್ಲ್ಡ್‌ ಸ್ಕೇಟ್‌ ಗೇಮ್‌ನಲ್ಲಿ ಇತಿಹಾಸ ಬರೆದ ಭಾರತ

ವರ್ಲ್ಡ್‌ ಸ್ಕೇಟ್‌ ಗೇಮ್‌ನಲ್ಲಿ ಇತಿಹಾಸ ಬರೆದ ಭಾರತ

ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟ್ ಗೇಮ್ಸ್ 2024 ರಲ್ಲಿ ಭಾರತದ ಮಹಿಳಾ ರೋಲರ್ ಡರ್ಬಿ ತಂಡವು ಕಂಚಿನ ಪದಕ ಗೆದ್ದಿದೆ. ಚೀನಾ ವಿರುದ್ಧದ ಪಂದ್ಯದಲ್ಲಿ ಭಾರತ 127-39 ಅಂತರದಲ್ಲಿ ಗೆಲುವು ಸಾಧಿಸಿತು. ಪುರುಷರ ತಂಡ ಪದಕ ಗೆಲ್ಲುವಲ್ಲಿ ವಿಫಲವಾಯಿತು.

ನವದೆಹಲಿ : ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟ್ ಗೇಮ್ಸ್ 2024 ರಲ್ಲಿ ಭಾರತದ ಮಹಿಳಾ ರೋಲರ್ ಡರ್ಬಿ ತಂಡವು ದೇಶಕ್ಕೆ ಮೊದಲ ಪದಕವನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ. ಶ್ರುತಿಕಾ ಸರೋದೆ ನೇತೃತ್ವದ ಭಾರತ ತಂಡವು ಮಹಿಳಾ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಅದ್ಭುತ ಪ್ರದರ್ಶನ ನೀಡಗ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ನೀಡಿದ ಪದಕವನ್ನು ತನ್ನದಾಗಿಸಿಕೊಂಡಿತು. ರೋಲರ್ ಡರ್ಬಿಯಲ್ಲಿ ವರ್ಲ್ಡ್ ಸ್ಕೇಟ್ ಗೇಮ್ಸ್‌ನಲ್ಲಿ 2ನೇ ಬಾರಿಗೆ ಮುಖಾಮುಖಿಯಾದ ಎರಡೂ ತಂಡಗಳು ತಮ್ಮ ಪ್ರಾಥಮಿಕ ಪಂದ್ಯಗಳ ಉದ್ದಕ್ಕೂ ಉತ್ತಮ ಸುಧಾರಣೆಗಳನ್ನು ತೋರಿಸಿದವು, ತಮ್ಮ ಫೈನಲ್‌ನ ಪ್ರಾರಂಭದಲ್ಲಿ ಸಮವಾಗಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದರು. ಆದರೆ, ಪಂದ್ಯ ಮುಕ್ತಾಯದ ವೇಳೆಗೆ ಭಾರತ 127 ರಿಂದ 39 ಸ್ಕೋರ್‌ನೊಂದಿಗೆ ಗೆಲುವು ಕಂಡಿತು. ಆ ಮೂಲಕ ಭಾರತಐತಿಹಾಸಿಕ ವಿಜಯವನ್ನು ಸಾಧಿಸಿತು.

ಭಾರತದ ಜಾಮರ್‌ಗಳನ್ನು ತಡೆಯುವುದು ಚೀನಾ ಆಟಗಾರ್ತಿಯರಿಗೆ ಸುಲಭವಾಗಿರಲಿಲ್ಲ. ಚೀನಾದ ಪ್ರತಿ ರಕ್ಷಣಾತ್ಮಕ ಲೋಪವನ್ನು ಭಾರತ ಬಳಕೆ ಮಾಡಿಕೊಂಡಿತು. ಮಿಂಚಿನ ವೇಗದ ಪಾಸ್‌ಗಳೊಂದಿಗೆ ಪಾಯಿಂಟ್‌ಗಳನ್ನು ಗಳಿಸಿದರು. ಚೀನಾದ ರಕ್ಷಣೆಯು ಭಾರತದ ಬಿರುಸಿನ ವೇಗ ಮತ್ತು ಚುರುಕುತನದ ಎದುರು ಮಂಕಾಯಿತು. ಭಾರತದ ಕಲ್ಲು ಬಂಡೆಯಂಥ ರಕ್ಷಣಾತ್ಮಕ ಫಾರ್ಮಟ್‌ಅನ್ನು ಬೇಧಿಸಿ ಅಂಕ ಗಳಿಸುವುದು ಚೀನಾದ ಜಾಮರ್‌ಗಳಿಗೆ ಸುಲಭವಾಗಿರಲಿಲ್ಲ. ಪ್ರತಿ ಅಂಕಕ್ಕೂ ಚೀನಾ ಪರದಾಡುವಂತಾಯಿತು. ತಮ್ಮ ಅಮೋಘ ವಿಜಯದ ಮೇಲೆ ಸವಾರಿ ಮಾಡಿದ ಭಾರತ ತಂಡವು ಕಂಚಿನ ಪದಕದ ಗೆಲುವು ಕಂಡಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments