ದೇಶ/ವಿದೇಶ

ಪಾಕಿಸ್ತಾನದೊಳಗೆ 150 ಕಿಮೀವರೆಗೂ ನುಗ್ಗಿತ್ತು ಏರ್​ಫೋರ್ಸ್..!

ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧದ ಬಗ್ಗೆ ಭಾರತೀಯ ಸೇನೆಯ ಮೂರೂ ಪಡೆಗಳ ಮುಖಂಡರುಗಳು ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತ-ಪಾಕ್ ಯುದ್ಧ ಶುರುವಾದ ಬಳಿಕ ಭಾರತೀಯ ವಾಯುಸೇನೆ ಬರೋಬ್ಬರಿ 150ಕಿಮೀನಷ್ಟು ಪಾಕಿಸ್ತಾನದೊಳಕ್ಕೆ ನುಗ್ಗಿತ್ತು ಅನ್ನೋದು ಬಹಿರಂಗ ಆಗಿದೆ.

ಭಾರತೀಯ ವಾಯುಸೇನೆಯ ಸುಖೋಯ್ ಯುದ್ಧ ವಿಮಾನಗಳು ಕರಾಚಿವರೆಗೂ ಹೋಗಿತ್ತು. ಭಾರತದ ಗಡಿಯಿಂದ 150 ಕಿಮೀ ದೂರದಲ್ಲಿರುವ ಕರಾಚಿಯ ಮಲಿರ್ ಕಂಟೋನ್ಮೆಂಟ್ ಮೇಲೂ ಬಾಂಬ್​​ಗಳನ್ನ ಸುರಿಸಿ ವಾಪಸಾಗಿವೆ. ಕಚಾರಿ ಬಂದರು ಬಳಿಯಿರೋ ಮಲಿರ್ ಕಂಟೋನ್ಮೆಂಟ್ ಬಳಿ ಇರೋ ಕೆಲ ಟಾರ್ಗೆಟ್​​ಗಳನ್ನೂ ಭಾರತೀಯ ವಾಯುಸೇನೆಯ ಫೈಟರ್​ಜೆಟ್​​ಗಳು ಉಡಾಯಿಸಿ ಬಂದಿದೆ. ಏರ್​​ ಮಾರ್ಷಲ್ ಎಕೆ ಭಾರ್ತಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಇದರ ಜೊತೆಗೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ವರೆಗೂ ಭಾರತದ ಫೈಟರ್​ಜೆಟ್​​ಗಳು ಹೋಗಿ ಬಂದಿವೆ. ರಾವಲ್ಪಿಂಡಿಯ ಚಕ್ಲಾಲ ಏರ್​​ಬೇಸ್, ರಫಿಕ್, ರಹಿಮ್ ಯಾರ್ ಖಾನ್, ಸರಗೋಧ, ಭುಲಾರಿ, ಜಾಕೋಬಾದ್​​ ಪ್ರದೇಶದ ಮೇಲೂ ದಾಳಿ ನಡೆಸಿ ಬಂದಿವೆ.

 

Comments (0)

Your email address will not be published. Required fields are marked *

Back to top button