ದೇಶ/ವಿದೇಶ

ಪಾಕ್ ದುಸ್ಸಾಹಸ.. ಭಾರೀ ಪೆಟ್ಟು ಕೊಟ್ಟ ಭಾರತ

ಪಹಲ್ಗಾಂ ಮೇಲೆ ಪಾಕಿಸ್ತಾನದ ಉಗ್ರರು ದಾಳಿ ಬೆನ್ನಲ್ಲೇ ಭಾರತ ಪಾಕ್​​ಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬಂದಿತ್ತು.. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನ ಸೇನೆಯೂ ಕೂಡ ಉಗ್ರರ ಜೊತೆ ಸೇರಿ ಭಾರತದ ಮೇಲೆ ಭೀಕರ ದಾಳಿ ಮಾಡ್ತಿದೆ.. ಪಾಕ್ ಮಾಡಿದ ಈ ದುಸ್ಸಾಹಸಕ್ಕೆ ಈಗ ಬೆಲೆ ತೆರುವಂತಾಗಿದೆ. ಪಾಕಿಸ್ತಾನ ಮಾಡಿದ ಕಿತಾಪತಿಗೆ ಭಾರತ ಕೂಡ ತಕ್ಕ ಪಾಠ ಕಲಿಸಿದೆ.

ಭಾರತದ ಜಮ್ಮು, ಕಾಶ್ಮೀರ, ಪಂಜಾಬ್ ಮೇಲೆ ಪಾಕಿಸ್ತಾನದ ಕ್ಷಿಪಣಿಗಳು ಹಾರಿಬಂದಿದೆ. ಆದ್ರೆ ಭಾರತೀಯ ಏರ್ ಡಿಫೆನ್ಸ್ ಈ ಎಲ್ಲ ಕ್ಷಿಪಣಿ ಹಾಗೂ ಡ್ರೋಣ್​​ಗಳನ್ನ ಮಾರ್ಗಮಧ್ಯೆಯೇ ಹೊಡೆದುರುಳಿಸಿದೆ. ಆತ್ಮಾಹುತಿ ಡ್ರೋಣ್ ಸೇರಿ 3 ಪಾಕಿಸ್ತಾನಿ ಜೆಟ್ ವಿಮಾನಗಳನ್ನ ಭಾರತ ಹೊಡೆದುಹಾಕಿದೆ.

ಭಾರತೀಯ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿದ ಪಾಕ್

ಪಾಕಿಸ್ತಾನ ಸೇನೆ ಭಾರತದ ಸೇನಾ ನೆಲೆಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಸುಮಾರು 35 ನಿಮಿಷಗಳ ಕಾಲ ಭಾರತ ಮೇಲೆ ದಾಳಿಗೆ ಪಾಕ್ ಯತ್ನಿಸಿತ್ತು..  ಜಮ್ಮು, ಉಧಾಂಪುರ, ಅಖ್ನೂರ್​, ಪೂಂಚ್, ಸತ್ವಾರ, ಸಾಂಬಾ, ಆರ್ ಎಸ್ ಪುರದಲ್ಲಿ ಕ್ಷಿಪಣಿ ದಾಳಿಗೆ ಯತ್ನನಡೆದಿದೆ. ರಾಜಸ್ಥಾನದ ಜೈಸಲ್ಮೇರ್​, ಪೋಖ್ರಾನ್​ ಮೇಲೂ ಪಾಕ್ ಕ್ಷಿಪಣಿ ಹಾರಿದೆ. ಪಂಜಾಬಿನ ಪಠಾಣ್​​ ಕೋಟ್​, ಜಲಂಧರ್ ಮೇಲೂ ಪಾಕ್ ದಾಳಿ ನಡೆಸಿದೆ.

ಪಾಕ್ ದಾಳಿಗೆ ಭಾರತೀಯ ಸೇನೆಯ ದಿಟ್ಟ ಪ್ರತ್ಯುತ್ತರ ಕೊಟ್ಟಿದೆ.  ಪಾಕಿಸ್ತಾನದ 8 ಡ್ರೋನ್, ಫೈಟರ್ ಜೆಟ್ ನಾಶ ಪಡಿಸಲಾಗಿದೆ.  ಪಾಕ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯಿಂದ್ಲೂ ದಾಳಿ ನಡೆದಿದೆ. ಫೈಸಲಾಬಾದ್-, ಸರ್ಗೋದಾ ಗಡಿ ಮೇಲೆ  ದಾಳಿ ನಡೆಸಿ ಪಾಕ್ ರಕ್ಷಣಾ ವ್ಯವಸ್ಥೆಗಳನ್ನ ನಾಶಪಡಿಸಲಾಗಿದೆ..

Comments (0)

Your email address will not be published. Required fields are marked *

Back to top button