ದೇಶ/ವಿದೇಶ

ಪಾಕಿಸ್ತಾನದಿಂದ ಬರೋ ಎಲ್ಲ ವಸ್ತುಗಳೂ ಬ್ಯಾನ್..!

ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರಗಾಮಿಗಳು 27 ಪ್ರವಾಸಿಗರನ್ನ ಹತ್ಯೆಗೈದಿದ್ದಕ್ಕೆ ಭಾರತ ಹಂತ ಹಂತವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಸಿಂದೂ ನದಿ ಒಪ್ಪಂದವನ್ನ ಭಾರತ ರದ್ದುಗೊಳಿಸಿದ್ದಲ್ಲದೆ, ಪಾಕ್​​ನ ಪ್ರಜೆಗಳು ಭಾರತ ಬಿಟ್ಟು ತೊಲಗಲು ಡೆಡ್​​ಲೈನ್ ವಿಧಿಸಿತ್ತು.. ಈಗ ಪಾಕಿಸ್ತಾನಕ್ಕೆ ಭಾರತ ಮಹಾನ್ ಹೊಡೆತ ಕೊಟ್ಟಿದೆ.. ಭಾರತ ಎಸೆದಿರೋ ಈ ಅಸ್ತ್ರಕ್ಕೆ ಪಾಕಿಸ್ತಾನ ಸುಧಾರಿಸಿಕೊಳ್ಳೋಕೆ ಸಾಧ್ಯವೇ ಇಲ್ಲ

ಪಾಕಿಸ್ತಾನದ ಎಲ್ಲಾ ವಸ್ತುಗಳು ಭಾರತದಲ್ಲಿ ಬ್ಯಾನ್..!

ಪಾಕಿಸ್ತಾನದ ಆರ್ಥಿಕಥೆಗೆ ಇದೀಗ ಭಾರತ ದೊಡ್ಡ ಪೆಟ್ಟು ಕೊಟ್ಟಿದೆ. ಪಾಕಿಸ್ತಾನ ಭಾರತದ ಜೊತೆ ವೈರತ್ವ ಇದ್ದರೂ ಕೂಡ ಆರ್ಥಿಕವಾಗಿ ವೈರತ್ವ ಇಲ್ಲ. ಪಾಕಿಸ್ತಾನದಿಂದ ಸಾಕಷ್ಟು ವಸ್ತುಗಳು ಭಾರತಕ್ಕೆ ಬರುತ್ತಿವೆ. ಪಾಕಿಸ್ತಾನಕ್ಕೆ ಭಾರತವೇ ಅತಿ ದೊಡ್ಡ ಗ್ರಾಹಕ ದೇಶ.. ಈಗ ಭಾರತ ಪಾಕಿಸ್ತಾನದಿಂದ ಯಾವುದೇ ವಸ್ತುಗಳನ್ನ ಖರೀದಿಸಲ್ಲ ಅಂತ ಹೇಳಿದೆ. ಪಾಕಿಸ್ತಾನದ ಎಲ್ಲ ವಸ್ತುಗಳನ್ನೂ ಭಾರತದಲ್ಲಿ ಬ್ಯಾನ್ ಮಾಡಿ ಘೋಷಣೆ  ಹೊರಡಿಸಲಾಗಿದೆ.. ಈಗ ಪಾಕಿಸ್ತಾನದ ಎಲ್ಲ ಉದ್ದಿಮೆಗಳೂ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಎದುರಾಗಲಿದೆ.

ನೇರವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಆಮದನ್ನು ನಿಷೇಧಿಸಲಾಗಿದೆ. ಭಾರತದ ಒಟ್ಟಾರೆ ಆಮದಿನಲ್ಲಿ ಪಾಕಿಸ್ತಾನದ ಪಾಲು ಕೇವಲ 0.0001ರಷ್ಟು ಮಾತ್ರ.. ಆದ್ರೆ ಪಾಕಿಸ್ತಾನದ ಪಾಲಿಗೆ ಅತಿ ಹೆಚ್ಚು ರಫ್ತು ಮಾಡುವುದೆ ಭಾರತಕ್ಕೆ.. ಈಗ ಅದಕ್ಕೂ ಕಲ್ಲು ಬಿದ್ದಿದೆ.  ಪುಲ್ವಾಮಾ ದಾಳಿ ಬಳಿಕ ಪಾಕ್ ರಫ್ತು 1 ಸಾವಿರ ಪಟ್ಟು ಇಳಿಕೆ ಆಗಿತ್ತು. ಈಗ ಸಂಪೂರ್ಣವಾಗಿ ಪಾಕ್​​ನಿಂದ ಆಮದು ನಿಷೇಧಗೊಂಡಿದೆ

ಪಾಕಿಸ್ತಾನದಿಂದ ಏನೆಲ್ಲಾ ಬರ್ತಿತ್ತು..? ಏನೆಲ್ಲಾ ಬ್ಯಾನ್ ಆಗಿದೆ..?

  • ಪಿಂಕ್ ಸಾಲ್ಟ್, ರಾಕ್ ಸಾಲ್ಟ್
  • ತಾಮ್ರ
  • ಗಾಜಿನ ಉತ್ಪನ್ನಗಳು
  • ಸಾವಯವ ರಾಸಾಯನಿಕಗಳು
  • ಸಲ್ಫರ್​​
  • ಹಣ್ಣು ಮತ್ತು ಒಣ ಹಣ್ಣು
  • ಎಣ್ಣೆಕಾಳುಗಳು
  • ಕಬ್ಬಿಣ ಮತ್ತು ಉಕ್ಕು
  • ಪ್ರಾಣಿಜನ್ಯ ಕೊಬ್ಬು
  • ಪ್ಲಾಸ್ಟಿಕ್
  • ಹತ್ತಿ
  • ಉಣ್ಣೆ

Comments (0)

Your email address will not be published. Required fields are marked *

Back to top button