Thursday, January 29, 2026
20 C
Bengaluru
Google search engine
LIVE
ಮನೆSportsಚೆನ್ನೈನಲ್ಲಿ ನಡೆದ ಪೊಲೋ ಕಪ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಧ್ರುವ್‌ಗೆ ಕಿರೀಟ!

ಚೆನ್ನೈನಲ್ಲಿ ನಡೆದ ಪೊಲೋ ಕಪ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಧ್ರುವ್‌ಗೆ ಕಿರೀಟ!

ಕೇವಲ 1 ಅಂಕದ ಅಂತರ, ಭಾರಿ ಪೈಪೋಟಿ, ಆದರೆ ಅಂತಿಮ ಹಂತದಲ್ಲಿ ಧ್ರುವ್ ಚವಾಣ್ ರೋಚಕ ಗೆಲುವು ಸಾಧಿಸಿ ಪೋಲೋ ಕಪ್‌ 2024 ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ.


ಪ್ರತಿಷ್ಠಿತ ಪೋಲೋ ಕಪ್‌ 2024ರ ಚಾಂಪಿಯನ್‌ಶಿಪ್‌ನಲ್ಲಿ ಮುಂಬೈನ ಧೃವ್‌ ಚವಾಣ್‌ ಚಾಂಪಿಯನ್ ಕೀರಿಟ ಮುಡಿಗೇರಿಸಿಕೊಂಡಿದ್ದಾರೆ. ಆದಿತ್ಯ ಚವಾಣ್‌ ವಿರುದ್ಧ ರೋಚಕ ಗೆಲುವು ಸಾಧಿಸಿ ಧೃವ್‌ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿದ್ದಾರೆ. ರೋಚಕ ರೇಸ್‌ನಲ್ಲಿ ಅಂತಿಮ ಸುತ್ತಿಗೂ ಮುನ್ನ ಧೃವ್‌ ಹಾಗೂ ಆದಿತ್ಯ ನಡುವೆ ಕೇವಲ 1 ಅಂಕದ ಅಂತರವಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಧೃವ್‌ (183 ಅಂಕಗಳು), ಒಟ್ಟಾರೆ 4 ಅಂಕಗಳ ಅಂತರದಲ್ಲಿ ಆದಿತ್ಯರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಓಜಸ್‌ ಸುರ್ವೆ 159 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು.

‘ನನ್ನ ಕನಸೀಗ ನನಸಾಗಿದೆ. ಗುರುವಾರ ನನ್ನ ಕಾರು ಪಲ್ಟಿ ಆಗಿ ಭಾರಿ ಆಘಾತ ಎದುರಾಗಿತ್ತು. ರೇಸ್‌ಗಳ ವೇಳೆ ನನ್ನ ತಂದೆ ಸಹ ಆಸ್ಪತ್ರೆಯಲ್ಲಿದ್ದರು. ಆದರೆ, ನಾನು ಛಲ ಬಿಡದೆ, ಗಮನ ಬೇರೆಡೆಗೆ ಜಾರದಂತೆ ಎಚ್ಚರವಹಿಸಿ ಪ್ರಶಸ್ತಿ ಜಯಿಸಿದೆ’ ಎಂದು ಹೇಳಿದರು. ಈ ಋತುವು ಅಹಮದಾಬಾದ್‌ನಲ್ಲಿ ಚಾಲಕರ ಆಯ್ಕೆ ಪ್ರಕ್ರಿಯೆಯೊಂದಿಗೆ ಆರಂಭಗೊಂಡಿತ್ತು. ಈ ಪ್ರಕ್ರಿಯೆ ಬಹಳ ಅಚ್ಚುಕಟ್ಟಾಗಿ, ಸೂಕ್ಷ್ಮವಾಗಿ ನಡೆದಿತ್ತು. ದೆಹಲಿ, ಬೆಂಗಳೂರು, ಮುಂಬೈ ಹಾಗೂ ಚೆನ್ನೈಗಳಲ್ಲೂ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments