Wednesday, August 20, 2025
18.9 C
Bengaluru
Google search engine
LIVE
ಮನೆ#Exclusive Newsಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಅಕ್ರಮ ಮತದಾನ; ರಾಹುಲ್​ ಗಾಂಧಿ ಆರೋಪ

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಅಕ್ರಮ ಮತದಾನ; ರಾಹುಲ್​ ಗಾಂಧಿ ಆರೋಪ

ನವದೆಹಲಿ: ಮಹಾರಾಷ್ಟ್ರ, ಕರ್ನಾಟಕ ಮತ್ತು ಹರಿಯಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಆರೋಪಿಸಿದ್ದರು. ಇದೀಗ ಅದಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿ ಸಾಕ್ಷಿ ಸಮೇತ ಪುನರುಚ್ಚಿಸಿದ್ದು, ಮಹಾರಾಷ್ಟ್ರ, ಕರ್ನಾಟಕದಲ್ಲಿ ವಿಧಾನಸಭೆ ಕ್ಷೇತ್ರಗಳಲ್ಲಿ ಯಾವು ರೀತಿ ಮತ್ತು ಎಷ್ಟು ಪ್ರಮಾಣದಲ್ಲಿ ನಕಲಿ ಮತದಾನ ನಡೆದಿದೆ ಎಂದು ರಾಹುಲ್​ ಮಾಹಿತಿ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಿಪಿಟಿ ಪ್ರಸೆಂಟ್​ಟೇಷನ್​ ಮೂಲಕ ಮತಗಳ್ಳತನದ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಸಂವಿಧಾನದ ಅಡಿಪಾಯವೇ ಒಂದು ವ್ಯಕ್ತಿಗೆ ಒಂದು ಮತ. ಆದರೆ ಭಾರತದ ಚುನಾವಣೆಗಳ ಬಗ್ಗೆ ನೋಡಿದಾಗ ಒಂದು ವ್ಯಕ್ತಿಗೆ ಒಂದು ಮತ ಭರವಸೆ ಎಷ್ಟು ಗಟ್ಟಿಯಾಗಿದೆ ಎಂಬುದೇ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತದಾರರ ಪಟ್ಟಿಯಲ್ಲಿ ವಂಚನೆ ನಡೆದಿದೆ ಎಂದು ರಾಹುಲ್​ ಗಾಂಧಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬೃಹತ್​ ಪ್ರಮಾಣದಲ್ಲಿ ಮತ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದಾರೆ.  ಕರ್ನಾಟಕದಲ್ಲಿ 40,009 ನಕಲಿ ಮತದಾರರ ವಿಳಾಸಗಳಿವೆ ಎಂದು ಹೇಳಿದ್ದಾರೆ. ಕಾಂಗ್ರೆಸ್​ ನಡೆಸಿದ ಮೋಟ್​ ಚೋರಿ ತನಿಖೆಯಲ್ಲಿ ಮನೆ ಸಂಖ್ಯೆ 0 ಎಂದು ಉಲ್ಲೇಖಿಸಿರುವುದಾಗಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಅವರ ಪ್ರಕಾರ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 1,00,250 ಮತಗಳನ್ನು ಅಕ್ರಮವಾಗಿ  ಸೇರಿಸಲಾಗಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.

ಒಬ್ಬನೇ ವ್ಯಕ್ತಿಯ ಹೆಸರು ಮತ್ತು ವಿವರಗಳು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ನೊಂದಣಿಯಾಗಿವೆ. ಕೆಲವೊಮ್ಮೆ ಒಂದೇ ವ್ಯಕ್ತಿಗೆ ಬೆಂಗಳೂರಿನ ಜೊತೆಗೆ ಮುಂಬೈ, ಲಕ್ನೋದಂತಹ ಬೇರೆ ರಾಜ್ಯಗಳಲ್ಲೂ ಮತದಾನದ ಹಕ್ಕು ನೀಡಲಾಗಿದೆ. ಅಂಥಹ 11,965 ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ಮಹದೇವಪುರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ವಿವರಗಳು:

ಮತಗಳ್ಳತನದ ವಿಧಗಳು                                     ಅಕ್ರಮ ಮತಗಳ ಸಂಖ್ಯೆ

ನಕಲಿ ಮತದಾರರು                                               11,965

ನಕಲಿ ಮತ್ತು ಅಮಾನ್ಯ ವಿಳಾಸ                                 40,009

ಒಂದೇ ವಿಳಾಸದಲ್ಲಿ ಬೃಹತ್​ ಸಂಖ್ಯೆ ಮತದಾರರು           10,452

ಅಮಾನ್ಯ ಫೋಟೋಗಳು                                         4,132

ಫಾರ್ಮ್​ 06 ದುರ್ಬಳಕೆ                                         33,692

ಒಟ್ಟು                                                             1,00,250

ಒಂದೇ ವಿಳಾಸದಲ್ಲಿ ಬೃಹತ್​ ಸಂಖ್ಯೆ ಮತದಾರರು ಅಂದರೆ ಸಣ್ಣ ಮನೆ ವಾಣಿಜ್ಯ ಮಳಿಗೆಯ ವಿಳಾಸದಲ್ಲಿ 50 ರಿಂದ 80ಕ್ಕೂ ಹೆಚ್ಚು ಮತದಾರರನ್ನು ನೋಂದಣಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಮತಗಳ್ಳತನಕ್ಕೆ ಸಂಬಂಧಿಸಿದಂತೆ ಮಹರಾಷ್ಟ್ರ, ಹರಿಯಾಣ ಚುನಾವಣೆಗಳು ಸೇರಿ ಹಲವು ವಿಚಾರಗಳ ಪ್ರಸ್ತಾಪ ಮಾಡಿದ್ದಾರೆ. ಮಹರಾಷ್ಟರದಲ್ಲಿ  ಐದು ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ಮತದಾರರು ಸೇರ್ಪಡೆಯಾಗಿದ್ದಾರೆ. ನಾವು ಚುನಾವಣೆ ಆಯೋಗವನ್ನು ಕೇಳಿದರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಿಡಿಕಾರಿದ್ರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments