ರುಚಿಕರವಾದ ಹುಣಸೇ ಕ್ಯಾಂಡಿ ಮಾಡುವ ವಿಧಾನ…


ಬೇಕಾಗುವ ಪದಾರ್ಥಗಳು…
. ಹುಣಸೇ ಹಣ್ಣು – ಒಂದು ಹಿಡಿ
. ಜೀರಿಗೆ ಪುಡಿ – ಒಂದು ಚಮಚ
. ಖಾರದ ಪುಡಿ -ಅರ್ಧ ಚಮಚ
. ಚಾಟ್ ಮಸಾಲ ಪುಡಿ – ಅರ್ಧ ಚಮಚ
. ಬೆಲ್ಲ -ಸ್ವಲ್ಪ
. ಉಪ್ಪು – ಸ್ವಲ್ಪ

ಮಾಡುವ ವಿಧಾನ….

. ಹುಣಸೆ ಹಣ್ಣನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಬಳಿಕ ನೆನೆಸಿಟ್ಟ ಹುಣಸೆಹಣ್ಣು ಹಾಗೂ ಉಪ್ಪನ್ನು ಮಿಕ್ಸಿ ಜಾರ್​ಗೆ ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.

. ಒಲೆಯ ಮೇಲೆ ಪ್ಯಾನ್ ಇಟ್ಟು ಬೆಲ್ಲ,ಒಂದು ಚಮಚ ನೀರು ಹಾಕಿ ಬೆಲ್ಲ ಕರಗಲು ಬಿಡಿ.

. ನಂತರ ರುಬ್ಬಿದ ಹುಣಸೆಹಣ್ಣು, ಉಪ್ಪು , ಖಾರದ ಪುಡಿ, ಚಾಟ್ ಮಸಾಲ ಪುಡಿ, ಜೀರಿಗೆ ಎಲ್ಲವನ್ನೂ ಹಾಕಿ , ಹಲ್ವ ರೀತಿ ಬರುವವರೆಗೆ ಕೈಯಾಡಿಸಿತ್ತಿರಿ. ಮಿಶ್ರಣ ತಣ್ಣಗಾದ ಬಳಿಕ ಕ್ಯಾಂಡಿ ಅಥವಾ ಪ್ಲಾಸ್ಟಿಕ್ ಚಮಚಕ್ಕೆ ಹಾಕಿ, ಕವರ್​ನಿಂದ ಮುಚ್ಚಿದರೆ ರುಚಿಕರವಾದ ಹುಣಸೆ ಹಣ್ಣಿನ ಮಿಠಾಯಿ ಸವಿಯಲು ಸಿದ್ಧ.

By admin

Leave a Reply

Your email address will not be published. Required fields are marked *

Verified by MonsterInsights