ಚಳಿಗಾಲ ಶುರುವಾಗಿದ್ದು , ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ನಿಗಾವಹಿಸಬೇಕು. ಚಳಿಗಾಲ ಶುರುವಾದಂತೆ ಮಕ್ಕಳನ್ನು ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.
ಚಳಿಗಾಲದಲ್ಲಿ ಮಕ್ಕಳು ಸೋಂಕುಗಳಿಗೆ ತುತ್ತಾಗುವುದು ಸಾಮನ್ಯ , ಫ್ಲೂ, ನೆಗಡಿ , ಗಂಟಲು ನೋವು ಮತ್ತು ಸೈನುಸೈಟಿಸ್​ನಂತಹ ಉಸಿರಾಟದ ಸೋಂಕುಗಳು ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸೋಂಕುಗಳು ಹೆಚ್ಚು ಸಾಂಕ್ರಾಮಿಕವಾಗಿರುವುರಿಂದ ಆರಂಭಿಕ ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ತಡೆಗಟ್ಟುವುದು ಬಹಳ ಮುಖ್ಯ.

ಸೂಕ್ತ ಪರಿಹಾರ
. ಜ್ವರ 5 ದಿನಕ್ಕಿಂತಲೂ ಹೆಚ್ಚು ಕಾಲ ಇದ್ದಾಗ
.ಊಟ , ನೀರು ಸೇವನೆ ನಿಲ್ಲಿಸುವುದು, ಅತೀರ್ವ ವಾಂತಿ, ಭೇದಿಯಾದಾಗ
. ಸಡಿಲವಾದ ಮಲ ಒಂದು ವಾರಕ್ಕಿಂತ ಹೆಚ್ಚು ಕಾಲ ಇದ್ದಾಗ
. ಉಸಿರಾಟ ಸಮಸ್ಯೆ
. ದೇಹದಲ್ಲಿ ದದ್ದುಗಳು ಕಂಡು ಬಂದರೆ
ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರುವುದು ಹೇಗೆ..?
ಜ್ವರದ ಲಸಿಕೆ ಪ್ರಮುಖವಾಗಿದ್ದು , ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸಿ.ನಿಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿರುವಂತೆ ನೋಡಿಕೊಳ್ಳಿ. ಮಕ್ಕಳ ಅಟಿಕೆಗಲನ್ನು ಸ್ವಚ್ಚಗೊಳಿಸಿ. ಕೈಗಳನ್ನು ಅಗಾಗ್ಗೆ ತೊಳೆಯಿರಿ.

ಶಾಲೆಗಳು ಮಕ್ಕಳಲ್ಲಿ ವೈರಲ್ ಜ್ವರಗಳು ಕಾಣಿಸಿಕೊಳ್ಳುವುದು ಹೆಚ್ಚು. ಇದನ್ನು ನಿಯಂರ್ತಿಸಲು ಲಸಿಕೆಗಳನ್ನು ಸಮಯಕ್ಕೆ ಸರಿಯಾಗಿ ಕೊಡಿಸುವುದು ಮುಖ್ಯವಾಗುತ್ತದೆ. ಮಗುವಿನಲ್ಲಿ ಅನಾರೋಗ್ಯದ ಲಕ್ಷಣಗಳನ್ನು ಕಂಡುಬಂದಾಗ ಆರಂಭಿಕ ಹಂತದಲ್ಲಿಯೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರಿಂದ ರೋಗವನ್ನು ತಡೆಯಬಹುದು.

By admin

Leave a Reply

Your email address will not be published. Required fields are marked *

Verified by MonsterInsights