ಮಂಗಳೂರು: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನಿಗಾಗಿ ಮಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆದಿದೆ..
ಸರಕಾರದ ಪರ ವಕೀಲರು ನ್ಯಾಯಾಲಯದಲ್ಲಿ ತನ್ನ ಮುಂದುವರಿದ ವಾದ ಮಂಡಿಸಿದರು. ಇದೇ ವೇಳೆ ತಿಮರೋಡಿ ಪರ ವಕೀಲರು ನಿರೀಕ್ಷಣ ಜಾಮೀನಿಗೆ ಪೂರಕವಾಗಿ ತನ್ನ ವಾದವನ್ನು ಮಂಡಿಸಿ, ಲಿಖೀತ ರೂಪದಲ್ಲಿಯೂ ನ್ಯಾಯಾಲಯಕ್ಕೆ ಸಲ್ಲಿಸಿದರು. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಅ.9ರಂದು ಆದೇಶ ನೀಡುವುದಾಗಿ ತಿಳಿಸಿ ಕಲಾಪವನ್ನು ಮುಂದೂಡಿದರು.


