Saturday, August 30, 2025
21.7 C
Bengaluru
Google search engine
LIVE
ಮನೆ#Exclusive NewsTop Newsಅಕ್ರಮ ಬೆಟ್ಟಿಂಗ್​ ಪ್ರಕರಣ; ಕಾಂಗ್ರೆಸ್​ ಶಾಸಕ ವೀರೇಂದ್ರ ಪಪ್ಪಿ ಆ.28ರವರೆಗೆ ಇಡಿ ಕಸ್ಟಡಿಗೆ

ಅಕ್ರಮ ಬೆಟ್ಟಿಂಗ್​ ಪ್ರಕರಣ; ಕಾಂಗ್ರೆಸ್​ ಶಾಸಕ ವೀರೇಂದ್ರ ಪಪ್ಪಿ ಆ.28ರವರೆಗೆ ಇಡಿ ಕಸ್ಟಡಿಗೆ

ಬೆಂಗಳೂರು: ಅಕ್ರಮ ಬೆಟ್ಟಿಂಗ್​ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗದ ಕಾಂಗ್ರೆಸ್​ ಶಾಸಕ ಕೆ.ಸಿ  ವೀರೇಂದ್ರ ಪಪ್ಪಿ ಅವರನ್ನು ಆಗಸ್ಟ್​ 28ರವರೆಗೆ ಇಡಿ ಕಸ್ಟಡಿಗೆ ನೀಡಿ ಬೆಂಗಳೂರಿನ 35ನೇ ಸಿಸಿಹೆಚ್​​ ಕೋರ್ಟ್​ ಆದೇಶಿಸಿದೆ.

ಕೆ.ಸಿ ವೀರೇಂದ್ರ ಪಪ್ಪಿ ಅವರನ್ನು 14 ದಿನ ವಶಕ್ಕೆ ನೀಡುವಂತೆ ಇಡಿ ಮನವಿ ಮಾಡಿತ್ತು. ಆದರೆ ಇಡಿ ವಶಕ್ಕೆ ನೀಡುವ ಅವಶ್ಯಕತೆ ಇಲ್ಲ ಎಂದು ವೀರೇಂದ್ರ ಪಪ್ಪಿ ಪರ ವಕೀಲರು ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್​ ಆಗಸ್ಟ್ 28ರವರೆಗೆ ಶಾಸಕರನ್ನು ಇಡಿ ವಶಕ್ಕೆ ನೀಡಿದೆ.

ಇಡಿ ಪರ ವಕೀಲರು ವಾದ ಮಂಡಿಸಿದ್ದು, ತನಿಖೆ ಅಗ್ಯತ್ಯವಿದೆ ಕೋಟ್ಯಾಂತರ ರೂ. ನಗದು ಕೆ.ಜಿ ಗಟ್ಟಲೇ ಚಿನ್ನ ಪತ್ತೆಯಾಗಿದೆ. ಆನ್​ಲೈನ್​​ ಮತ್ತು ಆಫ್​ಲೈನ್​ ಗೇಮ್​ಗಳ ಮೂಲಕ ಬೆಟ್ಟಿಂಗ್​ ಸೈಟ್​ಗಳ ವ್ಯವಹಾರ ನಡೆದಿದೆ. ವಿದೇಶಿ ವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ವಿಚಾರಣೆ ನಡೆಸಲು ಅವಶ್ಯಕತೆ ಇದೆ ಎಂದು ಇಡಿ ಪರ ವಕೀಲರು ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಧೀಶ ಸೈಯದ್ ಬಿ ರೆಹಮಾನ್ ಅವರು, ಆಗಸ್ಟ್​ 28ರ ವರೆಗೆ ಶಾಸಕನನ್ನು ಇಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.

ಅಕ್ರಮ ಬೆಟ್ಟಿಂಗ್ ಪ್ರಕರಣಕ್ಕೆ  ಸಂಬಂಧಿಸಿ ಕಾಂಗ್ರೆಸ್​ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಇಡಿ ಅಧಿಕಾರಿಗಳು ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್​ ನಲ್ಲಿ ಶುಕ್ರವಾರ ಬಂಧಿಸಿದ್ದರು. ಅವರಿಗೆ ಸಂಬಂಧಿಸಿದ 39 ಸ್ಥಳಗಳಲ್ಲಿ ದಾಳಿ ನಡೆಸಿದ  ಇಡಿಗೆ 12 ಕೋಟಿ ನಗದು ಹಣ ಪತ್ತೆಯಾಗಿದ್ದು 1 ಕೋಟಿ ವಿದೇಶ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ 10 ಕೆ.ಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments