Thursday, November 20, 2025
26.6 C
Bengaluru
Google search engine
LIVE
ಮನೆರಾಜ್ಯಪ್ರೆಸ್ಟೀಜ್ ಅಕ್ರಮ ಅಪಾರ್ಟ್​​ಮೆಂಟ್​​ಗೆ ಬಿಬಿಎಂಪಿ ಸಾಥ್ ..! - ಸರ್ಕಾರಕ್ಕೆ ದೂರು

ಪ್ರೆಸ್ಟೀಜ್ ಅಕ್ರಮ ಅಪಾರ್ಟ್​​ಮೆಂಟ್​​ಗೆ ಬಿಬಿಎಂಪಿ ಸಾಥ್ ..! – ಸರ್ಕಾರಕ್ಕೆ ದೂರು

ಪ್ರತಿಷ್ಠಿತ ಪ್ರೆಸ್ಟೀಜ್ ಬಿಲ್ಡರ್ಸ್ ಕಂಪನಿ ವಿರುದ್ಧ ದೂರೊಂದು ದಾಖಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ವಾರ್ಡ್ ನಂಬರ್ 192ರಲ್ಲಿರುವ ಪ್ರೆಸ್ಟೀಜ್ ಏಕರ್ಸ್ ಅಪಾರ್ಟ್​​ಮೆಂಟ್ ಕಾನೂನು ಬಾಹಿರವಾಗಿ ನಿರ್ಮಾಣ ಆಗುತ್ತಿದೆ ಎಂದು ದೂರು ನೀಡಲಾಗಿದೆ. ಬಿಬಿಎಂಪಿ ಟೌನ್ ಪ್ಲಾನಿಂಗ್ ವಿಭಾಗವು ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ರಸ್ತೆಯ ವಿಸ್ತೀರ್ಣದ ಸುಳ್ಳು ಮಾಹಿತಿ ನೀಡಿ ಹೆಚ್ಚುವರಿ FAR ನೀಡಲಾಗಿದೆ. ಅಧಿಕಾರಿಗಳು ಹಾಗೂ ಪ್ರೆಸ್ಟೀಜ್ ಕಂಪನಿಯ ಅಕ್ರಮ ಮೈತ್ರಿಯಿಂದಾಗಿ ಈ ಯಡವಟ್ಟು ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಸರ್ಕಾರಕ್ಕೆ ದೂರು ನೀಡಿದ್ದಾರೆ.

ಕೂಡಲೇ ನಿಯಮಾನುಸಾರ ಪ್ರೆಸ್ಟೀಜ್ ಏಕರ್ಸ್ ಕಟ್ಟಡದ ನಕ್ಷೆ ಮಂಜೂರಾತಿಯನ್ನು ರದ್ದುಪಡಿಸಬೇಕು. ಅಮಾಯಕ ಗ್ರಾಹಕರಿಗೆ ಆಗಬಹುದಾದ ಸಂಭಾವ್ಯ ವಂಚನೆ ತಡೆಯಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದು ನಿಶ್ಚಿತ ಎಂದು ದೂರುದಾರರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ADTP ಅಧೀನ ಅಧಿಕಾರಿಗಳು ಸದರಿ ಅಪಾರ್ಟ್​​ಮೆಂಟ್ ವಿಚಾರದಲ್ಲಿ ನಿಯಮ ಉಲ್ಲಂಘನೆ ಆಗಿರುವುದು ಸತ್ಯ. ಆದರೆ ದೊಡ್ಡವರು ಮಾಡಿರುವ ಕಾನೂನು ಬಾಹಿರ ಕೃತ್ಯದಿಂದ ನಮಗೆ ಭೀತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಲು ಪ್ರೆಸ್ಟೀಜ್ ಆಡಳಿತ ಮಂಡಳಿಯವರು ಫೋನ್ ಕರೆಯನ್ನೇ ಸ್ವೀಕರಿಸುತ್ತಿಲ್ಲ.

ಬೊಮ್ಮಸಂದ್ರ ಜಂಟಿ ಆಯುಕ್ತರು ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡದೆ ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪ ಕೇಳಿಬರುತ್ತಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments