ಕ್ರೈಂ ಸ್ಟೋರಿ

ಸಾಂಸ್ಕೃತಿಕ ನಗರಿಯಲ್ಲಿ ಇದೆಂಥಾ ಅಸಹ್ಯಸುಂದರಿ ಸಿಕ್ಕಳು ಅಂತ ಹೋದ್ರೆ.. ಹುಷಾರ್..!

ಮೈಸೂರು: ಸುಂದರ ಪ್ರವಾಸಿ ತಾಣ..ಆದ್ರೆ ಅದೆಷ್ಟು ಸುಂದರವೋ ಅಷ್ಟೇ ಡೇಂಜರ್.. ಸಾಂಸ್ಕೃತಿಕ ನಗರಿಯಲ್ಲೀಗ ಎತ್ತ ತಿರುಗಿದ್ರು ಗಲ್ ಗಲ್ ಸದ್ದು…ಚೆಂದದ ಹುಡುಗಿಯರನ್ನ ಇಟ್ಕೊಂಡು ವ್ಯವಹಾರ ಮಾಡೋ ಅಡ್ಡೆಗಳ ಪಟ್ಟಿ ದೊಡ್ಡದಿದೆ.. ಅಬ್ಬಾ..ಹುಡುಗಿ ಸೂಪರ್ರು.. ಒಂದು ಕೈ ನೋಡೇ ಬಿಡೋಣ ಅಂತ ಹೋದ್ರೆ ಮುಗಿದೇ ಹೋಯ್ತು..ನಿಗೂಢ ಕ್ಯಾಮರಾ ಆಕ್ಟೀವ್ ಆಗ್ತವೆ.. ಕೆಲಸ ಮುಗಿಸಿ ಹೊರಬರೋದರೊಳಗೆ ನಿಮ್ಮ ವಾಟ್ಸಪ್ ನಲ್ಲಿ ನಿಮ್ಮದೇ ಬೆತ್ತಲೇ ಫೋಟೋ ಮತ್ತು ವಿಡಿಯೋಗಳು..

ಯೆಸ್…ಇದು ಹನಿ ಹನಿ..ಟ್ರ್ಯಾಪ್ ಕಹಾನಿ.. ಮೈಸೂರು ಅಂದಾಕ್ಷಣ ನಮ್ಮ ಕಣ್ಣ ಮುಂದೇ ಬರೋದು ವೈಭವಯುತ ಅರಮನೆ, ಝೂ, ಚಾಮುಂಡಿ ಬೆಟ್ಟದಂತಹ ಪ್ರೇಕ್ಷಣೀಯ ಸ್ಥಳಗಳು..ಇದನ್ನ ನೋಡೋಕೆ ಬರೋ ಪ್ರವಾಸಿಗರನ್ನ ತಾಣಗಳು ಹೇಗೆ ಆಕರ್ಷಿಸುತ್ತವೋ, ಅದೇ ರೀತಿ ಹಣ ಇರೋರನ್ನ ಆಕರ್ಷಿಸುತ್ತವೆ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆಗಳು..

ಪಿಂಪ್ ಸ್ಯಾಂಟ್ರೋ ರವಿಯಂತವರಿಲ್ಲಿ ಲೆಕ್ಕಕ್ಕಿಲ್ಲದಷ್ಟು ಮಂದಿ ಅಡ್ಡೆ ತೆರೆದುಕೊಂಡು ಕೂತಿದ್ದಾರೆ. ಇದೂವರೆಗೂ ನೂರಾರು ಕೇಸುಗಳು ರಿಜಿಸ್ಟರ್ ಆಗಿವೆ. ಅದೆಷ್ಟು ಜನ ಪೊಲೀಸ್ ಠಾಣೆ ಬಾಗಿಲು ಬಡಿದು ಜೈಲು ಹೊಕ್ಕು ಬಂದಿದ್ದಾರೋ ಗೊತ್ತಿಲ್ಲ..ಏನೇ ಮಾಡಿದ್ರು, ಈ ವ್ಯವಹಾರಕ್ಕೆ ಬ್ರೇಕ್ ಹಾಕೋಕೆ ಸಾಧ್ಯವಾಗ್ತಿಲ್ಲ.. ಮಜಾ ಮಾಡೋಕೆ ಅಂತ ಹೋದವರೆಷ್ಟೋ..ಟ್ರ್ಯಾಪ್ಗೆ ಒಳಗಾಗಿ ದುಡ್ಡು ಕಳೆದುಕೊಂಡವರೆಷ್ಟೋ..ಮರ್ಯಾದೆಗೆ ಅಂಜಿ ದೂರು ಕೊಡೋದೆ ಸೈಲೆಂಟ್ ಆದವರೆಷ್ಟೋ.. ಗೊತ್ತಿಲ್ಲ..

ಒಂದು ಕಡೆ ಮಾನ ಮತ್ತೊಂದು ಕಡೆ ಹಣ ಎಲ್ಲವೂ ಢಮಾರ್.. ಅದ್ಯಾಕೋ ಏನೋ ಮೈಸೂರಿನಲ್ಲಿ ಮಾಂಸ ದಂಧೆಗೆ ಬ್ರೇಕ್ ಬೀಳ್ತಿಲ್ಲ..ವಾರಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಇದೀಗ ಗ್ರಾಮಾಂತರ ಠಾಣೆ ಪೊಲೀಸ್ರು ಓರ್ವ ಮಹಿಳೆ ಸೇರಿದಂತೆ ಮೂವರು ಹನಿ ಟ್ರ್ಯಾಪ್ ಖದೀಮರನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ಫಜಲುಲ್ಲಾ ರೆಹಮಾನ್, ರಿಜ್ವಾನ್, ಮೋನಾ ಬಂಧಿತ ಆರೋಪಿಗಳು..

ಉದ್ಯಮಿ ಸುನ್ನಿ ಎಂಬುವವರು ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದರು. ದಾರಿ ಮಧ್ಯೆ ಸುನ್ನಿ ಅವರಿಗೆ ಆರೋಪಿಗಳು ಪರಿಚಯವಾಗಿದ್ದಾರೆ. ಬಳಿಕ ಆರೋಪಿಗಳು ಮಾನಂದವಾಡಿ ರಸ್ತೆಯಲ್ಲಿ ಸುನ್ನಿ ಅವರ ಕಾರು ಅಡ್ಡಗಟ್ಟಿದ್ದಾರೆ. ಸುನ್ನಿ ಅವರನ್ನು ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಮೋನ ಜೊತೆ ನಗ್ನವಾಗಿ ಮಲಗಿಸಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿಕೊಂಡಿದ್ದಾರೆ. ನಂತರ ಫೋಟೋ ಹಾಗೂ ವಿಡಿಯೋಗಳನ್ನು ಸುನ್ನಿ ಅವರಿಗೆ ತೋರಿಸಿ ಬ್ಲ್ಯಾಕ್‌ಮೇಲ್ ಆರಂಭಿಸಿದ್ದಾರೆ.

ನಮಗೆ 10 ಲಕ್ಷ ರೂಪಾಯಿ ಕೊಡು ಇಲ್ಲವಾದರೇ ಈ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಆಗ ಉದ್ಯಮಿ ಸುನ್ನಿ ಅವರು 5 ಲಕ್ಷ ರೂ. ನೀಡಿದ್ದಾರೆ. ಬಳಿಕ ಆರೋಪಿಗಳು ಸುನ್ನಿ ಅವರು ಧರಿಸಿದ್ದ ಚಿನ್ನದ ಉಂಗುರ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.
ಸುನ್ನಿ ಅವರು ಕೇರಳದ ತಿರುನೆಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೃತ್ಯ ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನೆಲೆಯಲ್ಲಿ ಪ್ರಕರಣ ಇಲ್ಲಿಗೆ ವರ್ಗಾವಣೆಯಾಗಿತ್ತು. ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಚಾರಣೆ ವೇಳೆ ಇದೇ ತಂಡ ಮಡಿಕೇರಿಯಲ್ಲೂ ಇಂತಹದ್ದೇ ಕೃತ್ಯ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಂಧಿತರಿಂದ 50 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಂದರಿ ಸಿಕ್ಕಳು ಅಂತ ಹೋದ್ರೆ, ಮಾನ ಮೂರು ಕಾಸಿಗೆ ಹರಾಜಾಗುತ್ತೆ, ಕೂಡಿಟ್ಟ ಕಾಸು ಕಿರಾತಕರ ಜೇಬು ಸೇರುತ್ತೆ.. ಮೂರು ನಿಮಿಷದ ಸುಖ..ಲಕ್ಷಾಂತರ ರೂಪಾಯಿಗೆ ದೋಖಾ..ಹೀಗಾಗಿ ವಿಟ ಪುರುಷರೇ ಹುಷಾರ್…

Comments (0)

Your email address will not be published. Required fields are marked *

Back to top button