Tuesday, March 3, 2026
22.4 C
Bengaluru
Google search engine
LIVE
ಮನೆಆರೋಗ್ಯಒಂದು ಲೀಟರ್ ಇಲಿ ಹಾಲು ಕುಡಿದ್ರೆ ನೀವೇ ಶ್ರೀಮಂತರು; ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

ಒಂದು ಲೀಟರ್ ಇಲಿ ಹಾಲು ಕುಡಿದ್ರೆ ನೀವೇ ಶ್ರೀಮಂತರು; ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

 ಲೈಪ್ ಸ್ಟೈಲ್ :  ಇಲಿ ಹಾಲು ತುಂಬಾ ದುಬಾರಿ ಆಗಿದ್ದು, ಇದನ್ನು ಪಡೆಯುವುದು ಅಷ್ಟು ಸುಲಭವಾದ ಮಾತಲ್ಲ. 30 ನಿಮಿಷಗಳ ಪ್ರಕ್ರಿಯೆಯಲ್ಲಿ ಇಲಿಯಿಂದ ಕೊಂಚ ಹಾಲು ಮಾತ್ರ ಉತ್ಪಾದಿಸಲು ಸಾಧ್ಯ.

ಸಾಮಾನ್ಯವಾಗಿ ಹಸು, ಎಮ್ಮೆ, ಕುರಿ, ಕತ್ತೆ, ಸೋಯಾ ಹಾಲು ಹೀಗೆ ನಾನಾ ರೀತಿಯ ಹಾಲನ್ನು ಕುಡಿದಿರುತ್ತೀರಿ. ಆದರೆ ಎಂದಾದರೂ ಇಲಿ ಹಾಲಿನ ಬಗ್ಗೆ ಕೇಳಿದ್ದೀರಾ? ಈ ಹಾಲು ಎಷ್ಟು ದುಬಾರಿ ಎಂಬುವುದು ನಿಮಗೆ ಗೊತ್ತಾ? ಕೇಳಿದ್ರೆ ಖಂಡಿತ ನೀವು ಶಾಕ್ ಆಗ್ತೀರಿ.

ಹೌದು, ಇಲಿ ಹಾಲು ತುಂಬಾ ದುಬಾರಿ ಆಗಿದ್ದು, ಇದನ್ನು ಪಡೆಯುವುದು ಅಷ್ಟು ಸುಲಭವಾದ ಮಾತಲ್ಲ. 30 ನಿಮಿಷಗಳ ಪ್ರಕ್ರಿಯೆಯಲ್ಲಿ ಇಲಿಯಿಂದ ಕೊಂಚ ಹಾಲು ಮಾತ್ರ ಉತ್ಪಾದಿಸಲು ಸಾಧ್ಯ.

ಕೇವಲ ಒಂದು ಲೀಟರ್ ಹಾಲು ಪಡೆಯಲು ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಇಲಿಗಳು ಬೇಕಾಗುತ್ತದೆ. ಈ ಇಲಿಗಳ 1 ಲೀಟರ್ ಹಾಲಿನ ಮೌಲ್ಯ 23 ಸಾವಿರ ಯುರೋಗಳು. ಅಂದರೆ ಬರೋಬ್ಬರಿ 18 ಲಕ್ಷ ರೂಪಾಯಿ.
ವಾಸ್ತವವಾಗಿ ಇಲಿ ಹಾಲನ್ನು ಸಂಶೋಧನೆಯ ಸಾಧನವಾಗಿ ಬಳಸಲಾಗುತ್ತದೆ. ಮಲೇರಿಯಾ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡುವ ಔಷಧಿ, ವಸ್ತುಗಳನ್ನು ತಯಾರಿಸಲು ಇಲಿ ಹಾಲನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಪ್ರತಿಯೊಬ್ಬರು ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದಕ್ಕಾಗಿ ಹಸು, ಎಮ್ಮೆ ಹಾಲು ಬಳಸುತ್ತಾರೆ. ಮತ್ತೆ ಕೆಲವರು ಆಡಿನ ಹಾಲನ್ನು ಬಳಸುತ್ತಾರೆ.
ಮತ್ತೊಂದಷ್ಟು ಮಂದಿ ಕತ್ತೆ ಹಾಲು, ಒಂಟೆ ಹಾಲು ಮುಂತಾದ ಪೌಷ್ಟಿಕಾಂಶವುಳ್ಳ ಹಾಲನ್ನು ಬಳಸುತ್ತಾರೆ. ಇವೆಲ್ಲದಕ್ಕೂ ಕೂಡ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಈ ಹಾಲುಗಳಲ್ಲಿ ಹೆಚ್ಚಿನ ಪೋಷಕಾಂಶಗಳಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments