ನವದೆಹಲಿ: ಡಿಸಿಎಂ ಆಗಿ ಸಂಘದ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ RSS ಪ್ರಾರ್ಥನೆ ಹಾಡಿದ್ದು ತಪ್ಪು. ಕೆಪಿಸಿಸಿ ಅಧ್ಯಕ್ಷರಾಗಿ ಹೇಳಿಕೆ ನೀಡಿದ್ರೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿರುವುದನ್ನು ಬಿಜೆಪಿಯವರು ಸಮರ್ಥಿಸಿಕೊಳ್ಳುತ್ತಾರೆ. RSS ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಹೇಳಿದ್ರೆ ನಮ್ಮ ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು ಎಲ್ಲರೂ ಇರುತ್ತಾರೆ. RSS, ತಾಲಿಬಾನ್ಗಳು ಇರುತ್ತಾರೆ. ಆದ್ರೆ ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ.ಒಂದು ವೇಳೆ ಹಾಗೆ ಹೇಳಿದ್ದರೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರು.
ಆರ್‌ಎಸ್‌ಎಸ್ ಮಹಾತ್ಮಾ ಗಾಂಧೀಜಿಯವರನ್ನು ಕೊಂದಂತಹ ಸಂಘಟನೆ. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಅವರಿಗೆ ಹಲವು ಮುಖಗಳಿವೆ.ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕರಣಿ ಅಂತಾ ಹಲವು ಮುಖಗಳಿವೆ. ಯಾರಿಗೆ ಸಂದೇಶ ಕೊಡಲು ಸಂಘದ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಉಪಮುಖ್ಯಮಂತ್ರಿ ಆಗಿ ಹಾಡಿದರೆ ನಮ್ಮ ಅಭ್ಯಂತರವಿಲ್ಲ ಎಂದ್ರು.