ಬೆಂಗಳೂರು : ಬಾಂಬೆ ಮಿಠಾಯಿ..ಬಾಂಬೆ ವಿಠಾಯಿ ಈ ಹೆಸರು ಕೇಳದವರು ಯಾರಿದ್ದಾರೆ? ಹೇಳಿ?ಬಾಂಬೆ ಮಿಠಾಯಿ ಅಂತ ಹೇಳುತ್ತಿರುವಾಗಲೇ ಕೆಲವರ ಬಾಯಲ್ಲಿ ನೀರೂರಲಿಯೋದು ಗ್ಯಾರಂಟಿ…ಇನ್ನ ಈ ಬಾಂಬೆ ವಿಠಾಯಿ ಹೆಸರು ನಮ್ಮ ಬಾಲ್ಯದೊಂದಿಗೆ ಥಳುಕು ಹಾಕಿಕೊಂಡಿದೆ…ಈಗಲೂ ಈ ಬಾಂಬೆ ಮಿಠಾಯಿ ಅಂದರೆ ಪುಟ್ಟ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಫೆವರೇಟ್.ನೋಡಲು ಪಿಂಕ್ ಬಣ್ಣದಲ್ಲಿ ಕಾಣುವ ಬಾಂಬೆ ವಿಠಾಯಿ ಬಾಯಿಗೆ ಇಡುತ್ತಿದ್ದಂತೆ ಕರಗಿ ಸಿಹಿಯಾಗುವ ಈ ಸಿಹಿ ತಿಂಡಿ ಇದೀಗ ಬ್ಯಾನ್ ಆಗುವ ಸಾಧ್ಯತೆ ಇದೆ.
ಜಾತ್ರೆಯಗಳಲ್ಲಿ ಪ್ರಮುಖ ತಿನಿಸು ಅಂದ್ರೆ ಅದು ಬಾಂಬೆ ಮಿಠಾಯಿ.ಈ ಬಾಂಬೆ ಮಿಠಾಯಿ ಕೇರಳ ಸರ್ಕಾರ ಈಗಾಗಲೇ ಬ್ಯಾನ್ ಮಾಡಿದೆ. ಇದರಂತೆಯೇ ಕರ್ನಾಟಕದಲ್ಲಿಯೂ ಈ ಸಿಹಿ ತಿನಿಸಿನ ಬಗ್ಗೆ ಪರೀಕ್ಷೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ. ಒಂದು ವೇಳೆ ರೋಗಕಾರಕ ರಾಸಾಯನಿಕ ಇರುವುದು ಪತ್ತೆಯಾದರೆ ಕರ್ನಾಟಕದಲ್ಲಿಯೂ ಬ್ಯಾನ್ ಮಾಡುವ ಸಾಧ್ಯತೆ ಇದೆ ಅಂತ ಆಹಾರ ಇಲಾಖೆ ಹೇಳಿದೆ..ಇದಕ್ಕೆ ಕಾರಣ ಗುಲಾಬಿ ಬಣ್ಣದಲ್ಲಿ ಕಾಣುವ ಆ ಸಿಹಿ ತಿಂಡಿಯಲ್ಲಿ ವಿಷಕಾರಕ ರಾಸಾಯನಿಕಗಳು ಇವೆಯಂತೆ! ಹೀಗಾಗಿ ಕರ್ನಾಟಕದಲ್ಲಿ ಈ ಬಾಂಬೆ ಮಿಠಾಯಿ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಾಂಬೆ ಮಿಠಾಯಿಯಲ್ಲಿದ್ಯಂತೆ ಕ್ಯಾನ್ಸರ್ ಉಂಟು ಮಾಡುವ ವಸ್ತು! ಬಾಂಬೆ ಮಿಠಾಯಿಯಲ್ಲಿ ರೋಡಮೈನ್ – ಬಿ ಎಂಬ ವಿಷಕಾರಿ ರಾಸಾಯನಿಕಗಳು ಇರುತ್ತವಂತೆ. ಇದರಲ್ಲಿ ರೋಡಮೈನ್ ಬಿ ಎಂಬ ವಿಷಕಾರಿ ವಸ್ತು ಇರುವುದನ್ನು ಆಹಾರ ಮತ್ತು ಆರೋಗ್ಯ ತಜ್ಞರು ಪತ್ತೆ ಹಚ್ಚಿದ್ದಾರೆ.