ಬರ್ತ್ಡೇ ದಿನ ಮನೆಯಲ್ಲಿ ಇರಲ್ಲ” – ಅಪ್ಪು ಹೇಳಿದ ಹಳೆಯ ಮಾತು ವೈರಲ್, ಅಭಿಮಾನಿಗಳು ಭಾವುಕ

ಕನ್ನಡ ಚಿತ್ರರಂಗದ ಪ್ರಿಯ ನಟ ಪುನೀತ್ ರಾಜ್ಕುಮಾರ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನೆನಪುಗಳು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿವೆ. ಇಂದು (ಮಾರ್ಚ್ 17) ಅವರ ಜನ್ಮದಿನ, ಅಭಿಮಾನಿಗಳ ಹೃದಯವನ್ನು ತಟ್ಟುತ್ತಿದೆ.
ನಟನೆ, ಗಾಯನ, ಸಿನಿಮಾ ನಿರ್ಮಾಣ ಮಾತ್ರವಲ್ಲದೆ ಪುನೀತ್ ರಾಜ್ಕುಮಾರ್ ನಿರೂಪಕರಾಗಿಯೂ ಜನಪ್ರಿಯತೆ ಪಡೆದಿದ್ದರು. ವಿಶೇಷವಾಗಿ ಅವರು ನಡೆಸಿಕೊಟ್ಟ ಕನ್ನಡದ ಕೋಟ್ಯಧಿಪತಿ ಬಹಳ ಜನಪ್ರಿಯವಾಗಿತ್ತು.

ಈ ಕಾರ್ಯಕ್ರಮಕ್ಕಾಗಿ ಅವರಿಗೆ ಸುಮಾರು 8 ಕೋಟಿ ರೂಪಾಯಿ ಸಂಭಾವನೆ ದೊರೆತಿತ್ತು. ಆದರೆ ಆ ಹಣವನ್ನು ತಮ್ಮ ವೈಯಕ್ತಿಕ ಬಳಕೆಗೆ ಬಳಸದೆ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟಿದ್ದರು. ಮೈಸೂರಿನ ಶಕ್ತಿಧಾಮ ಸಂಸ್ಥೆಯ ಮಕ್ಕಳ ಶಿಕ್ಷಣಕ್ಕಾಗಿ ಅವರು ಆ ಸಂಪೂರ್ಣ ಹಣವನ್ನು ನೀಡಿದ್ದರು.
ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಇರುವುದರಿಂದ ಅವರ ಶಿಕ್ಷಣಕ್ಕಾಗಿ ಅಲ್ಲಿಯೇ ಒಂದು ಶಾಲೆ ಆರಂಭಿಸಬೇಕು ಎಂಬುದು ಪುನೀತ್ ಅವರ ಆಶಯವಾಗಿತ್ತು. ಅದರಂತೆ ಬಳಿಕ ಶಾಲೆಯನ್ನು ಆರಂಭಿಸಲಾಯಿತು.
ಶಕ್ತಿಧಾಮದ ಈ ಶಾಲೆ ಮುಖ್ಯವಾಗಿ ಹೆಣ್ಣುಮಕ್ಕಳಿಗಾಗಿ ನಿರ್ಮಿಸಲಾಗಿದ್ದು, ಅಲ್ಲಿನ ಮಕ್ಕಳ ಜೊತೆಗೆ ಹೊರಗಿನಿಂದ ಬರುವ ಬಡ ಹೆಣ್ಣುಮಕ್ಕಳಿಗೂ ಶಿಕ್ಷಣದ ಅವಕಾಶ ನೀಡಬೇಕು. ಅಪ್ಪು ಇಲ್ಲದಿದ್ದರೂ, ಅವರ ಮಾನವೀಯತೆ ಮತ್ತು ಸಮಾಜಮುಖಿ ಕಾರ್ಯಗಳು ಅಭಿಮಾನಿಗಳ ಹೃದಯದಲ್ಲಿ ಸದಾ ಜೀವಂತವಾಗಿವೆ. ಅವರ ಹುಟ್ಟುಹಬ್ಬದಂದು ಆ ನೆನಪುಗಳನ್ನು ಜೀವಂತಗೊಳಿಸಿದೆ.



