#Exclusive NewsTop Newsರಾಜಕೀಯರಾಜ್ಯಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸುತ್ತೇನೆ : ಕುಮಾ‌ರ್ ಬಂಗಾರಪ್ಪ

ಶಿವಮೊಗ್ಗ : ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾಗಬಹುದು ಎಂಬ ನಿರೀಕ್ಷೆ ಇದ್ದು, ಅವಕಾಶ ಸಿಕ್ಕರೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಕುಮಾ‌ರ್ ಬಂಗಾರಪ್ಪ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, 30 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಒಬಿಸಿ ಸಮುದಾಯದಲ್ಲಿ ನನ್ನನ್ನು ಪರಿಗಣಿಸಿ ಎಂದಿದ್ದೇನೆ. ಒಬಿಸಿಗೆ ಅಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲ ಸಮಾಜ ಒಟ್ಟೆಗೆ ತಗೆದುಕೊಂಡು ಹೋಗಲು ಸಹಕಾರಿ ಆಗಲಿದೆ. ಅವಕಾಶ ಕೊಟ್ಟರೆ ನೂರಕ್ಕೆ ನೂರು ನಿಭಾಯಿಸುತ್ತೇನೆ ಎಂದರು. ಬಿಜೆಪಿಯ ಭಿನ್ನಮತ ವಿಚಾರದ ಬಗ್ಗೆ ಮಾತನಾಡಿ, ಬಣ ರಾಜಕೀಯ ಅಂತ ಅಲ್ಲ. ನಮ್ಮ ಅನಿಸಿಕೆಗಳನ್ನು ಹೈ ಕಮಾಂಡ್​ಗೆ ತಿಳಿಸಿದ್ದೇವೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಹೈಕ ಮಾಂಡ್ ತೆಗೆದುಕೊಳ್ಳುತ್ತದೆ. ಎಲ್ಲರನ್ನು ಜೊತೆಗೆ ಕರೆದು ಕೊಂಡು ಬಿಜೆಪಿ ಅಧಿಕಾರಕ್ಕೆ ತರುವ ತಯಾರಿ ನಡಿಬೇಕು ಅಂದಿದ್ದೇವೆ.

Comments (0)

Your email address will not be published. Required fields are marked *

Back to top button