Sunday, December 7, 2025
18.4 C
Bengaluru
Google search engine
LIVE
ಮನೆರಾಜಕೀಯ1 ಸಾವಿರದ ವಾಚ್ ಕಟ್ತೇನೆ, 10 ಲಕ್ಷ ರೂ. ವಾಚ್ ಕಟ್ತೇನೆ: ಡಿಕೆ ಶಿವಕುಮಾರ್‌

1 ಸಾವಿರದ ವಾಚ್ ಕಟ್ತೇನೆ, 10 ಲಕ್ಷ ರೂ. ವಾಚ್ ಕಟ್ತೇನೆ: ಡಿಕೆ ಶಿವಕುಮಾರ್‌

ಹಾಸನ: ನನಗೆ ಎಷ್ಟು ವಾಚ್ ಬೇಕಾದರೂ ಕಟ್ಟುವಷ್ಟು ಶಕ್ತಿ ಇದೆ. ನಾನು ಒಂದು ಸಾವಿರ ರೂ ವಾಚ್ ಕಟುತ್ತೇನೆ, 10 ಲಕ್ಷ ರೂ ವಾಚ್ ಕಟುತ್ತೇನೆ. ಅದು ಅವರವರ ವೈಯಕ್ತಿಕ ವಿಚಾರ, ಆಸೆಗಳು.ಕೆಲವರು ಒಂದು ಸಾವಿರದ ಶೂ ಹಾಕೋತಾರೆ ಕೆಲವರು ಒಂದು ‌ಲಕ್ಷದ ಶೂ ಹಾಕೋತಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.. ರಾಜ್ಯ ರಾಜಕೀಯದಲ್ಲಿ ಕೈ ಗಡಿಯಾರದ ಜಟಾಪಟಿ ಜೋರಾಗಿದ್ದು, ಕಾಂಗ್ರೆಸ್​​​​ ಮತ್ತು ಬಿಜೆಪಿ ನಡುವೆ ಸಂಘರ್ಷಕ್ಕೆ ಸೃಷ್ಟಿಸಿದೆ.. ಈ ವಿಚಾರಕ್ಕೆ ಡಿಸಿಎಂ ಡಿ. ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ..

ಮಂಡ್ಯದಲ್ಲಿ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಯಾರು ಪ್ಯಾಂಟ್ ಹಾಕುತ್ತಾರೆ, ವಾಚ್ ಕಟ್ಟುತ್ತಾರೆ, ಕನ್ನಡಕ ಹಾಕುತ್ತಾರೆ ಅದನ್ನು ಕೇಳೋಕೆ ಬರಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಕೆಲವರು ಸಾವಿರ ರೂಪಾಯಿ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಲಕ್ಷ ರೂ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ.

ಇಡಿ ನೋಟಿಸ್​ ವಿಚಾರವಾಗಿ ಮಾತನಾಡಿದ ಅವರು, ನೋಟಿಸ್ ಓದಿದ್ದೇನೆ, ಲಾಯರ್ ಜತೆ ಚರ್ಚಿಸಿ ವಿಚಾರಣೆಗೆ ಹೋಗುವೆ. ನೋಟಿಸ್ ನೀಡೋದು ಏನಿತ್ತು, ಪಕ್ಷಕ್ಕೆ ಹಣ ಕೊಡದೆ ಯಾರಿಗೆ ಕೊಡೋಣ ಎಂದು ಹೇಳಿದ್ದಾರೆ. ನನ್ನನ್ನ ಹೆದರಿಸುತ್ತೀನಿ ಅನ್ಕೊಂಡ್ರೆ ಅದು ಸಾಧ್ಯವಿಲ್ಲ. ವಕೀಲರ ಬಳಿ‌ ಮಾತನಾಡಿ ರಿಪ್ಲೈ ಕೊಡ್ತೇನೆ. ನನಗೆ ನೋಟಿಸ್ ಕೊಡುವಂತದ್ದು ಏನಿತ್ತು. ಎಲ್ಲಾ ಬ್ಲಾಕ್ ವೈಟ್ ಅಲ್ಲಿ ಇದೆ. ನಮ್ಮ ಪಾರ್ಟಿಗೆ ಕೊಡದೆ ಇನ್ಯಾರಿಗ್ರೀ ಕೊಡಲಿ ಎಂದು ಹೇಳಿದರು.

ಕೃಷ್ಣ ಭೈರೇಗೌಡರ ಕೆಲಸ ಸರ್ಕಾರದ 6ನೇ ಗ್ಯಾರಂಟಿಯಾಗಿದೆ. ನಮ್ಮ ಸರ್ಕಾರದ 6ನೇ ಗ್ಯಾರಂಟಿ ಈ ಭೂಮಿ ಗ್ಯಾರಂಟಿ. 5 ಗ್ಯಾರಂಟಿ ಯೋಜನೆಗಳು ಸೇರಿ ಕಾಂಗ್ರೆಸ್ ಗಟ್ಟಿಯಾಗಿದೆ. ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಜನರ ಖಾತೆಗೆ ಹಾಕಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಮೇಕೆದಾಟು ಯೋಜನೆ ಜಾರಿಯಾದರೆ ಜನರಿಗೆ ನೀರು ಸಿಗುತ್ತದೆ. ಮಂಡ್ಯ, ಮೈಸೂರು ಭಾಗದ ಜನರಿಗೆ ಕಷ್ಟಕಾಲದಲ್ಲಿ ನೀರು ಸಿಗುತ್ತೆ. ದೇವರು ವರ ಅಥವಾ ಶಾಪ ಕೊಡಲ್ಲ, ಕೇವಲ ಅವಕಾಶ ಕೊಡುತ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅನ್ನೋದು ಮುಖ್ಯ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಮ್ಮದು ಅಭಿವೃದ್ಧಿ ಸರ್ಕಾರ, ಹೊಸ ಹುರುಪು ತಂದ ಸರ್ಕಾರ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments